ಮಹಾರಾಷ್ಟ್ರ ಗೌರ್ನರ್ ರಾಜೀನಾಮೆ ನೀಡಲು ಸಿದ್ಧ ಎಂದ ರೌತ್; ಹೇಳಿಕೆ ನಿರಾಕರಿಸಿದ ರಾಜಭವನ

ಶಿವಸೇನೆಯ ಉದ್ಧವ್ ಠಾಕ್ರೆಯ ಬಣದೊಂದಿಗೆ ಗುರುತಿಸಿಕೊಂಡಿರುವ ಸಂಜಯ್ ರೌತ್, ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. 
ಭಗತ್ ಸಿಂಗ್ ಕೋಶಿಯಾರಿ
ಭಗತ್ ಸಿಂಗ್ ಕೋಶಿಯಾರಿ

ಮುಂಬೈ: ಶಿವಸೇನೆಯ ಉದ್ಧವ್ ಠಾಕ್ರೆಯ ಬಣದೊಂದಿಗೆ ಗುರುತಿಸಿಕೊಂಡಿರುವ ಸಂಜಯ್ ರೌತ್, ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದಕ್ಕಾಗಿ ಶಿವಸೇನೆ (ಯುಬಿಟಿ) ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿತ್ತು ಈ ಬಳಿಕ ರೌತ್ ಮಾತನಾಡಿ, ರಾಜ್ಯಪಾಲರು ಹುದ್ದೆ ಬಿಡುವುದಕ್ಕೆ ನಿರ್ಧರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಛತ್ರಪತಿ ಶಿವಾಜಿ ಮಹಾರಾಜರನ್ನು ಹಿಂದಿನ ಕಾಲದ ಐಕಾನ್ ಎಂದು ಹೇಳಿದ್ದರು. ಇದನ್ನೇ ಶಿವಾಜಿ ಮಹಾರಾಜರಿಗೆ ಮಾಡಿದ ಅವಮಾನ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೇ ಅವರನ್ನು ಪದವಿಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿತ್ತು. 

ಈ ಬಗ್ಗೆ ಮಾತನಾಡಿರುವ ರೌತ್, ರಾಜ್ಯಪಾಲರು ತಮ್ಮ ಹುದ್ದೆಯನ್ನು ಬಿಡುವ ಇಂಗಿತ ಹೊಂದಿದ್ದಾರೆ. ಇದು ಮಹಾರಾಷ್ಟ್ರ ವ್ಯಾಪಿ ಉದ್ಧವ್ ಠಾಕ್ರೆ ಬಣ ಕರೆ ನೀಡಿದ್ದರ ಪರಿಣಾಮ" ಎಂದು ಹೇಳಿದ್ದರು. 

ಅಷ್ಟೇ ಅಲ್ಲದೇ ಮಹಾರಾಷ್ಟ್ರದ ಶತ್ರುಗಳ ವಿರುದ್ಧದ ಸಮರ ಮುಂದುವರೆಯುತ್ತದೆ ಎಂದು ಟ್ವೀಟ್ ಮಾಡಿದ್ದರು. ಆದರೆ ರಾಜಭವನ ಈ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದು, "ರಾಜ್ಯಪಾಲರು ಹುದ್ದೆಯನ್ನು ತ್ಯಜಿಸುವ ಆಯ್ಕೆಯನ್ನು ಪರಿಗಣಿಸುತ್ತಿದ್ದಾರೆ ಎಂಬ ಸುದ್ದಿ ಆಧಾರವಿಲ್ಲದ್ದು" ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com