ಹೈದ್ರಾಬಾದ್: ವೈಎಸ್ ಆರ್ ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಇದ್ದ ಕಾರನ್ನು ಎಳೆದೊಯ್ದ ಪೊಲೀಸರು!

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ಅವರ ರೆಡ್ಡಿ ಅವರ ಸಹೋದರಿ ಹಾಗೂ ವೈಎಸ್ ಆರ್ ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಇದ್ದ ಕಾರನ್ನು ಪೊಲೀಸರು ಎಳೆದೊಯ್ದ ಘಟನೆ ಮಂಗಳವಾರ ನಡೆದಿದೆ.
ಶರ್ಮಿಳಾ ರೆಡ್ಡಿ
ಶರ್ಮಿಳಾ ರೆಡ್ಡಿ

ಹೈದ್ರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ಅವರ ರೆಡ್ಡಿ ಅವರ ಸಹೋದರಿ ಹಾಗೂ ವೈಎಸ್ ಆರ್ ಟಿಪಿ ಮುಖ್ಯಸ್ಥೆ ಶರ್ಮಿಳಾ ರೆಡ್ಡಿ ಇದ್ದ ಕಾರನ್ನು ಪೊಲೀಸರು ಎಳೆದೊಯ್ದ ಘಟನೆ ಮಂಗಳವಾರ ನಡೆದಿದೆ.

 ಶರ್ಮಿಳಾ ರೆಡ್ಡಿ ಒಳಗಡೆ ಕುಳಿತಿದ್ದರೂ ಅವರ ಕಾರನ್ನು ಕ್ರೇನ್ ಸಹಾಯದಿಂದ ಪೊಲೀಸರು ಎಳೆದೊಯ್ದಿದಿದ್ದಾರೆ. ಜನ ಹಾಗೂ ಪೊಲೀಸರು ಕೂಡಾ ಅದರ ಹಿಂದೆಯೇ ಓಡಿದ್ದಾರೆ. 

ಆಡಳಿತಾರೂಢ ಟಿಆರ್ ಎಸ್ ವಿರುದ್ಧ ವೈಎಸ್ ಶರ್ಮಿಳಾ ಸೋಮವಾರ ವಾರಂಗಲ್ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ವೈಎಸ್ ಆರ್ ಕಾಂಗ್ರೆಸ್ ಹಾಗೂ ಟಿಆರ್ ಎಸ್ ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಶರ್ಮಿಳಾ ಅವರ ಬೆಂಗಾವಲು ವಾಹನ ಮೇಲೆ ದಾಳಿ ನಡೆಸಿದ್ದ ಟಿಆರ್ ಎಸ್ ಕಾರ್ಯಕರ್ತರು ಬಸ್ ವೊಂದಕ್ಕೆ ಬೆಂಕಿ ಹಚ್ಚಿದ್ದರು.

ವೈಎಸ್ ಆರ್ ಟಿಪಿಯ ಕೆಲ ಮುಖಂಡರ ಕಾರುಗಳನ್ನು ಧ್ವಂಸಗೊಳಿಸಲಾಯಿತ್ತು. ನಂತರ ಶರ್ಮಿಳಾ ಅವರನ್ನು ಬಂಧಿಸಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com