ಸುದ್ದಿಯ ವೇಗಕ್ಕಿಂತಲೂ ನಿಖರತೆ ಮುಖ್ಯ: ಮಾಹಿತಿ, ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್
ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಸುದ್ದಿಯ ವೇಗಕ್ಕಿಂತಲೂ ನಿಖರತೆ ಬಹಳ ಮುಖ್ಯವಾದದ್ದು ಎಂದು ಹೇಳಿದ್ದಾರೆ.
Published: 30th November 2022 01:39 AM | Last Updated: 30th November 2022 01:39 AM | A+A A-

ಅನುರಾಗ್ ಠಾಕೂರ್
ನವದೆಹಲಿ: ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಸುದ್ದಿಯ ವೇಗಕ್ಕಿಂತಲೂ ನಿಖರತೆ ಬಹಳ ಮುಖ್ಯವಾದದ್ದು ಎಂದು ಹೇಳಿದ್ದಾರೆ.
ಸಾರ್ವಜನಿಕರ ಮುಂದೆ ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ವಾಸ್ತವಾಂಶಗಳನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಸಚಿವರು ಹೇಳಿದ್ದು, ನಿಖರ ಸುದ್ದಿ ಪ್ರಸಾರ ಮಾಡುವುದು ಮಾಧ್ಯಮಗಳ ಆದ್ಯ ಕರ್ತವ್ಯವಾಗಬೇಕು ಎಂದು ಕರೆ ನೀಡಿದ್ದು, ಸುದ್ದಿ ತಲುಪಿಸುವ ವೇಗ ಎಷ್ಟು ಮುಖ್ಯವೋ ಅದಕ್ಕಿಂತಲೂ ಸುದ್ದಿಯ ನಿಖರತೆ ಮುಖ್ಯ ಎಂದು ಹೇಳಿದ್ದಾರೆ.
ಸಚಿವರು ದೆಹಲಿಯಲ್ಲಿ ಏಷ್ಯಾ ಪೆಸಿಫಿಕ್ ಬ್ರಾಡ್ ಕಾಸ್ಟಿಂಗ್ (ಎಬಿಯು) ಜನರಲ್ ಅಸೆಂಬ್ಲಿಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣ ವಿಸ್ತಾರವಾದಷ್ಟೂ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ ಎಂದು ಠಾಕೂರ್ ಆತಂಕ ವ್ಯಕ್ತಪಡಿಸಿದ್ದಾರೆ
ಸರ್ಕಾರ ಸುಳ್ಳು ಸುದ್ದಿ ತಡೆಯುವುದಕ್ಕೆ ಪಿಐಬಿಯಲ್ಲಿ ಫ್ಯಾಕ್ಟ್ ಚೆಕ್ ಘಟಕವನ್ನೇ ಸ್ಥಾಪಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.