ಧರಾವಿ ಮರು ಅಭಿವೃದ್ಧಿ ಯೋಜನೆ ಅದಾನಿ ತೆಕ್ಕೆಗೆ; 5069 ಕೋಟಿ ರೂ. ಗೆ ಬಿಡ್

259 ಹೆಕ್ಟೇರ್ ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ. 
ಅದಾನಿ
ಅದಾನಿ

ಮುಂಬೈ: 259 ಹೆಕ್ಟೇರ್ ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ. 

ಅದಾನಿ ಸಮೂಹ ಸಂಸ್ಥೆ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅದಾನಿ ಸಮೂಹ 5,069 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿದ್ದು, ಜಗತ್ತಿನಲ್ಲೇ ಅತಿ ದೊಡ್ಡ ಸ್ಲಮ್ ನ ಮರು ಅಭಿವೃದ್ಧಿ ಇದಾಗಿದೆ.  ಡಿಎಲ್ಎಫ್ 2,025 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿತ್ತು ಎಂದು ಯೋಜನೆಯ ಸಿಇಒ ವಿಆರ್ ಶ್ರೀನಿವಾಸ್ ತಿಳಿಸಿದ್ದಾರೆ.

ಬಿಡ್ಡಿಂಗ್ ನ ವಿವರಗಳನ್ನು ನಾವು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ, ವಿವರಗಳನ್ನು ಪರಿಶೀಲಿಸಿ ಸರ್ಕಾರ ಅಂತಿಮ ಅನುಮೋದನೆ ನೀಡಲಿದೆ ಎಂದು ಪಿಟಿಐ ಗೆ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ ಏಕನಾಥ್ ಶಿಂಧೆ ಸರ್ಕಾರ ಕೆಲವೇ ವಾರಗಳಲ್ಲಿ ಯೋಜನೆಗೆ ಅನುಮೋದನೆ ನೀಡಲಿದೆ. 20,000 ಕೋಟಿ ರೂಪಾಯಿಗಳ ಯೋಜನೆಗೆ ಈ ಬಿಡ್ಡಿಂಗ್ ನಡೆದಿದ್ದು, ಯೋಜನೆಗೆ 7 ವರ್ಷಗಳ ಗಡುವು ನೀಡಲಾಗಿದೆ. ಈಗ 2.5 ಚದರ ಕಿ.ಮೀ ನಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿರುವ 6.5 ಲಕ್ಷ ಸ್ಲಮ್ ಮಂದಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com