ದೆಹಲಿ ಏಮ್ಸ್ ಸರ್ವರ್ 7 ನೇ ದಿನವೂ ಡೌನ್, 2 ಅಮಾನತು

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ಸರ್ವರ್ ಸತತ 7 ನೇ ದಿನವೂ  ಡೌನ್ ಆಗಿದೆ. ಆದರೆ ಅಧಿಕೃತ ಮೂಲಗಳು ಇ-ಆಸ್ಪತ್ರೆ ಡೇಟಾವನ್ನು ಸರ್ವರ್ ಗಳಲ್ಲಿ ಮರುಸ್ಥಾಪಿಸಲಾಗಿದೆ ಎಂದು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ಸರ್ವರ್ ಸತತ 7 ನೇ ದಿನವೂ  ಡೌನ್ ಆಗಿದೆ. ಆದರೆ ಅಧಿಕೃತ ಮೂಲಗಳು ಇ-ಆಸ್ಪತ್ರೆ ಡೇಟಾವನ್ನು ಸರ್ವರ್ ಗಳಲ್ಲಿ ಮರುಸ್ಥಾಪಿಸಲಾಗಿದೆ ಎಂದು ತಿಳಿಸಿವೆ. 

ಹೊರ ರೋಗಿಗಳು, ಒಳ ರೋಗಿಗಳು, ಪ್ರಯೋಗಾಲಯಗಳು ಸೇರಿದಂತೆ ಆಸ್ಪತ್ರೆಯ ಎಲ್ಲಾ ಸೇವೆಗಳನ್ನೂ ಮರುಸ್ಥಾಪಿಸುವುದಕ್ಕೂ ಮುನ್ನ ನೆಟ್ವರ್ಕ್ ನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. 

ಬೃಹತ್ ಪ್ರಮಾಣದ ಡೇಟಾ ಇರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಕೆಲವು ಸಮಯ ತೆಗೆದುಕೊಳ್ಳುತ್ತಿದೆ. ಸೈಬರ್ ಭದ್ರತೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಏಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಸರ್ವರ್ ಡೌನ್ ಗೆ ಸಂಬಂಧಿಸಿದಂತೆ ಸುಲಿಗೆ ಹಾಗೂ ಸೈಬರ್ ಭಯೋತ್ಪಾದನೆಯಡಿ ಗುಪ್ತಚರ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ಈ ನಡುವೆ ಎರಡು ಸಿಸ್ಟಮ್ ಅನಾಲಿಸ್ಟ್ ಗಳನ್ನು ಏಮ್ಸ್ ಅಮಾನತುಗೊಳಿಸಿದೆ. ತನಿಖಾ ಸಂಸ್ಥೆಗಳ ಶಿಫಾರಸುಗಳ ಪ್ರಕಾರ ಆಸ್ಪತ್ರೆಯ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com