ಗಂಗಾ ಶುದ್ಧೀಕರಣ ರಾಷ್ಟ್ರೀಯ ಮಿಷನ್ ನಿಂದ 1,145 ಕೋಟಿ ಮೌಲ್ಯದ 14 ಯೋಜನೆಗಳಿಗೆ ಅನುಮೋದನೆ!

ಗಂಗಾ ಶುದ್ಧೀಕರಣ ರಾಷ್ಟ್ರೀಯ ಮಿಷನ್‌ನ ಕಾರ್ಯಕಾರಿ ಸಮಿತಿಯು ಒಳಚರಂಡಿ ನಿರ್ವಹಣೆ, ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿದ 1,145 ಕೋಟಿ ರೂಪಾಯಿಗಳ 14 ಯೋಜನೆಗಳಿಗೆ ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಂಗಾ ಶುದ್ಧೀಕರಣ ರಾಷ್ಟ್ರೀಯ ಮಿಷನ್‌ನ ಕಾರ್ಯಕಾರಿ ಸಮಿತಿಯು ಒಳಚರಂಡಿ ನಿರ್ವಹಣೆ, ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿದ 1,145 ಕೋಟಿ ರೂಪಾಯಿಗಳ 14 ಯೋಜನೆಗಳಿಗೆ ಅನುಮೋದನೆ ನೀಡಿದೆ.
  
ಎನ್‌ಎಂಸಿಜಿಯ ನಿರ್ದೇಶಕ ಜಿ ಅಶೋಕ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ 45ನೇ ಸಭೆಯಲ್ಲಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಐದು ಮುಖ್ಯ ಗಂಗಾ ಜಲಾನಯನ ರಾಜ್ಯಗಳಾದ ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಒಳಚರಂಡಿ ನಿರ್ವಹಣೆಗೆ ಸಂಬಂಧಿಸಿದ ಎಂಟು ಯೋಜನೆಗಳನ್ನು ಇದು ಒಳಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಒಳಚರಂಡಿ ನಿರ್ವಹಣೆಗಾಗಿ, ಉತ್ತರ ಪ್ರದೇಶದ ನಾಲ್ಕು ಯೋಜನೆಗಳನ್ನು ಅನುಮೋದಿಸಲಾಗಿದ್ದು, ವಾರಣಾಸಿಯಲ್ಲಿ 55 MLD ಕೊಳಚೆನೀರು ಸಂಸ್ಕರಣಾ ಘಟಕವನ್ನು (STP) ನಿರ್ಮಿಸುವ ಮೂಲಕ ಒಳಚರಂಡಿ ಟ್ಯಾಪಿಂಗ್ ಮತ್ತು 308.09 ಕೋಟಿ ವೆಚ್ಚದ ಇತರ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.

ಅಸ್ಸಿ, ಸನ್ಮೆ ಘಾಟ್ ಮತ್ತು ನಖ್ಹಾ  ಪ್ರದೇಶಗಳಿಂದ ಮೂರು ಚರಂಡಿಗಳಿಂದ ಸಂಸ್ಕರಿಸದ ವಿಸರ್ಜನೆಯನ್ನು ಶೂನ್ಯಕ್ಕಿಳಿಸುವ ಉದ್ದೇಶದಿಂದ ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಅದು ಹೇಳಿದೆ. ಇತರೆ ಯೋಜನೆಗಳಲ್ಲಿ 13 MLD STP ನಿರ್ಮಾಣ ಮತ್ತು 77.70 ಕೋಟಿ ವೆಚ್ಚದಲ್ಲಿ ವೃಂದಾವನದಲ್ಲಿ ಅಸ್ತಿತ್ವದಲ್ಲಿರುವ ರಚನೆಗಳ ನವೀಕರಣ, 12 MLD STP ಗಳ ನಿರ್ಮಾಣ ಮತ್ತು ಮಥುರಾ ಜಿಲ್ಲೆಯ ಕೋಸಿ ಕಲನ್ ಪಟ್ಟಣದಲ್ಲಿ ರೂ 66.59 ವೆಚ್ಚದ ಪ್ರತಿಬಂಧ ಮತ್ತು ಡೈವರ್ಷನ್ (I&D) ನೆಟ್‌ವರ್ಕ್ ಅನ್ನು ಹಾಕುವುದು ಸೇರಿವೆ. ಇದಲ್ಲದೆ ಆರು MLD STP ಗಳು ಮತ್ತು ಮಥುರಾದ ಛಾತಾ ಪಟ್ಟಣದಲ್ಲಿ I&D ನೆಟ್‌ವರ್ಕ್‌ನ ಸ್ಥಾಪನೆ ಕೂಡ ಯೋಜನೆಯ ಭಾಗವಾಗಿದೆ ಎನ್ನಲಾಗಿದೆ.

ಮಥುರಾ-ವೃಂದಾವನದಲ್ಲಿನ ಮೇಲಿನ ಯೋಜನೆಗಳು ಕೋಸಿ ನದಿಯಿಂದ ಹೊರಹೋಗುವ ಎರಡು, 11 ಒಳಚರಂಡಿಗಳನ್ನು ತಡೆಹಿಡಿಯಲು ಮತ್ತು ತಿರುಗಿಸಲು ಯೋಜಿಸುತ್ತವೆ, ಇದು ಅಂತಿಮವಾಗಿ ಮಥುರಾದಲ್ಲಿ ಯಮುನಾ ನದಿಗೆ ಸೇರುತ್ತದೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com