ಪಂಜಾಬ್: ವಿಶ್ವಾಸಮತ ಗೆದ್ದ ಭಗವಂತ್ ಮನ್ ನೇತೃತ್ವದ ಎಎಪಿ ಸರ್ಕಾರ, ಕಾಂಗ್ರೆಸ್ ಸಭಾತ್ಯಾಗ

ಪಂಜಾಬ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮನ್ ನೇತೃತ್ವದ ಎಎಪಿ ಸರ್ಕಾರ ವಿಶ್ವಾಸಮತ ಗೆದ್ದಿದೆ. ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ಭಗವಂತ್ ಮನ್
ಭಗವಂತ್ ಮನ್

ಚಂಡೀಗಢ: ಪಂಜಾಬ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮನ್ ನೇತೃತ್ವದ ಎಎಪಿ ಸರ್ಕಾರ ವಿಶ್ವಾಸಮತ ಗೆದ್ದಿದೆ. ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

ಸದನದಲ್ಲಿದ್ದ 93 ಶಾಸಕರು ತಮ್ಮ ಕೈಗಳನ್ನು ಮೇಲಕ್ಕೆತ್ತುವ ಮೂಲಕ ವಿಶ್ವಾಸಮತ ಪರ ಬೆಂಬಲ ವ್ಯಕ್ತಪಡಿಸಿದರು. ನಿರ್ಣಯದ ವಿರುದ್ಧವಾಗಿ ಯಾವುದೇ ಮತ ಬೀಳಲಿಲ್ಲ. ಅಂತಿಮವಾಗಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಲಾಯಿತು.

ಕಳೆದ ತಿಂಗಳು 27 ರಂದು ಮುಖ್ಯಮಂತ್ರಿ ಭಗವಂತ್ ಮನ್ ವಿಶ್ವಾಸ ಮತ ನಿರ್ಣಯವನ್ನು ಮಂಡಿಸಿದ್ದರು. ಕಾಂಗ್ರೆಸ್ ಶಾಸಕರ ಸಭಾತ್ಯಾಗದ ನಡುವೆ ಚರ್ಚೆ ಆರಂಭವಾಯಿತು. ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯ ತರುವ ಮೂಲಕ ಸಂವಿಧಾನದ ನಿಯಮಗಳನ್ನು ಎಎಪಿ ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿದ ಬಿಜೆಪಿಯ ಇಬ್ಬರು ಶಾಸಕರಾದ ಅಶ್ವಾನಿ ಶರ್ಮಾ ಮತ್ತು ಜಂಗಿ ಲಾಲ್ ಮಹಾಜನ್ ಅಧಿವೇಶನವನ್ನು ಬಹಿಷ್ಕರಿಸಿದರು.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 92, ಕಾಂಗ್ರೆಸ್ 18, ಎಸ್ ಎಡಿ 3, ಬಿಜೆಪಿ 2, ತಲಾ 1 ಬಿಎಸ್ಪಿ ಮತ್ತು ಪಕ್ಷೇತರ ಶಾಸಕರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com