ಅಯೋಧ್ಯೆ: ಕಾರ್ಯಕ್ರಮವೊಂದರಲ್ಲಿ ರಾವಣನ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದನಿಗೆ ಹೃದಯ ಸ್ತಂಭನ, ಸಾವು

ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ರಾಮಲೀಲಾ ಕಾರ್ಯಕ್ರಮದಲ್ಲಿ 'ರಾವಣ'ನ ಪಾತ್ರವನ್ನು ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ಹೃದಯ ಸ್ತಂಭನದಿಂದಾಗಿ ವೇದಿಕೆಯಲ್ಲೇ ಮೃತಪಟ್ಟಿದ್ದಾರೆ.
ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದ ಪತಿರಾಮ್
ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದ ಪತಿರಾಮ್

ಅಯೋಧ್ಯಾ: ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ರಾಮಲೀಲಾ ಕಾರ್ಯಕ್ರಮದಲ್ಲಿ 'ರಾವಣ'ನ ಪಾತ್ರವನ್ನು ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ಹೃದಯ ಸ್ತಂಭನದಿಂದಾಗಿ ವೇದಿಕೆಯಲ್ಲೇ ಮೃತಪಟ್ಟಿದ್ದಾರೆ.

ಫತೇಪುರ್ ಜಿಲ್ಲೆಯಲ್ಲಿ ರಾಮಲೀಲಾದ 'ಲಂಕಾ ದಹನ' ಸಂಚಿಕೆಯಲ್ಲಿ 'ಹನುಮಾನ್' ಪಾತ್ರವನ್ನು ನಿರ್ವಹಿಸುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಒಂದು ದಿನದ ನಂತರ ಮತ್ತೊಬ್ಬರು ಸಾವಿಗೀಡಾಗಿದ್ದಾರೆ.

60 ವರ್ಷದ ಕಲಾವಿದ ಪತಿರಾಮ್ ಅವರು ಅಯೋಧ್ಯೆಯ ಐಹಾರ್ ಗ್ರಾಮದಲ್ಲಿ 'ಸೀತಾ ಹರಣ್' ಸಂಚಿಕೆಯಲ್ಲಿ 'ರಾವಣ' ಪಾತ್ರವನ್ನು ನಿರ್ವಹಿಸುತ್ತಿದ್ದಾಗ ನೋವಿನಿಂದ ಎದೆಯನ್ನು ಹಿಡಿದಿದ್ದರು. ಅಲ್ಲಿದ್ದವರು ಪ್ರತಿಕ್ರಿಯಿಸುವ ಮುನ್ನವೇ ಅವರು ವೇದಿಕೆಯ ಮೇಲೆ ಕುಸಿದರು.

ರಾಮಲೀಲಾ ಪ್ರದರ್ಶನವನ್ನು ತಕ್ಷಣವೇ ನಿಲ್ಲಿಸಲಾಯಿತು ಮತ್ತು ಪತಿರಾಮ್ ಅವರನ್ನು ರಾಮಲೀಲಾ ಸಮಿತಿಯ ಸದಸ್ಯರು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಅವರ ಸಾವಿಗೆ ಹೃದಯ ಸ್ತಂಭನವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ.

ಗ್ರಾಮದ ಮುಖಂಡ ಪುನೀತ್ ಕುಮಾರ್ ಸಾಹು ಮಾತನಾಡಿ, ಹಲವು ವರ್ಷಗಳಿಂದ ಪತಿರಾಮ್ ರಾವಣನ ಪಾತ್ರ ಮಾಡುತ್ತಿದ್ದಾರೆ ಎಂದರು.

ಮೃತರಿಗೆ ಪತ್ನಿ ದೇವಮತಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಈಪೈಕಿ ಒಬ್ಬರಿಗೆ ವಿವಾಹವಾಗಿದೆ.

ಈ ಹಿಂದೆ ಇದೇ ರೀತಿಯ ಘಟನೆಯಲ್ಲಿ, ಹನುಮನ ಪಾತ್ರವನ್ನು ನಿರ್ವಹಿಸುತ್ತಿದ್ದ 50 ವರ್ಷದ ರಾಮ್ ಸ್ವರೂಪ್ ಫತೇಪುರ್ ಜಿಲ್ಲೆಯ ಸೇಲಂಪುರ್ ಗ್ರಾಮದಲ್ಲಿ ಪ್ರದರ್ಶನ ನೀಡುವ ವೇಳೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com