ಮುಂಬೈ: ನಾಲ್ಕು ಕಾರುಗಳು- ಆಂಬ್ಯುಲೆನ್ಸ್ ನಡುವಣ ವಿಚಿತ್ರ ರೀತಿಯ ಅಪಘಾತ, ಐವರು ಸಾವು
ಮುಂಬೈನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ರಸ್ತೆಯಲ್ಲಿ ಇಂದು ಮುಂಜಾನೆ ನಾಲ್ಕು ಕಾರುಗಳು ಮತ್ತು ಆಂಬ್ಯುಲೆನ್ಸ್ ನಡುವೆ ಸಂಭವಿಸಿದ ವಿಲಕ್ಷಣ ಅಪಘಾತದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
Published: 05th October 2022 09:33 AM | Last Updated: 05th October 2022 09:36 AM | A+A A-

ಅಪಘಾತದ ಸ್ಥಳದ ಚಿತ್ರ
ಮುಂಬೈ: ಮುಂಬೈನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ರಸ್ತೆಯಲ್ಲಿ ಇಂದು ಮುಂಜಾನೆ ನಾಲ್ಕು ಕಾರುಗಳು ಮತ್ತು ಆಂಬ್ಯುಲೆನ್ಸ್ ನಡುವೆ ಸಂಭವಿಸಿದ ವಿಲಕ್ಷಣಕಾರಿ ಅಪಘಾತದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ನಾಲ್ಕು ಕಾರುಗಳು ಮತ್ತು ಆಂಬ್ಯುಲೆನ್ಸ್ ನಡುವೆ ಡಿಕ್ಕಿಯಾಗಿ 10 ಜನರು ಗಾಯಗೊಂಡಿರುವುದಾಗಿ ಹಿಂದಿನ ವರದಿಗಳು ಸೂಚಿಸಿದ್ದವು. ಮುಂಜಾನೆ 3.30ಕ್ಕೆ ಈ ಘಟನೆ ನಡೆದಿದ್ದು, ಅಪಘಾತದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ರಸ್ತೆಯಲ್ಲಿ ಒಂದು ವಾಹನ ಅಪಘಾತಕ್ಕೀಡಾಗಿತ್ತು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಕರೆಸಲಾಯಿತು. ಆಂಬ್ಯುಲೆನ್ಸ್ ಸ್ಥಳದಿಂದ ಹೊರಡುವಾಗ ವಾಹನವೊಂದು ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಹಲವರಿಗೆ ಗಾಯಗಳಾಗಿವೆ.
Maharashtra | 10 people got injured in a collision between four cars and an ambulance on Mumbai's Bandra Worli Sea Link pic.twitter.com/7ihc7xnZv5
— ANI (@ANI) October 5, 2022
ಘಟನೆಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಂಬೈನ ಬಾಂದ್ರಾ-ವರ್ಲಿ ಸಮುದ್ರದ ಲಿಂಕ್‌ನಲ್ಲಿ ಸಂಭವಿಸಿದ ಅಪಘಾತದಿಂದ ಐವರು ಸಾವನ್ನಪ್ಪಿರುವ ಘಟನೆಯಿಂದ ನೋವಾಗಿದೆ. ದುಃಖಿತ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಭಾವಿಸುತ್ತೇನೆ ಎಂದು ನರೇಂದ್ರ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
Pained by the loss of lives due to an accident on the Bandra-Worli Sea Link in Mumbai. Condolences to the bereaved families. I hope that those who have been injured have a speedy recovery: PM @narendramodi
— PMO India (@PMOIndia) October 5, 2022
ಈ ಹಿಂದೆ ಅಪಘಾತ ಸಂಭವಿಸಿದ ಸ್ಥಳದಲ್ಲಿದ್ದ ವಾಹನಗಳ ಗುಂಪಿಗೆ ಹಿಂದಿನಿಂದ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿರುವ ದೃಶ್ಯಾವಳಿಯನ್ನು ಸಿಸಿಟಿವಿ ತೋರಿಸುತ್ತಿದೆ. ಸಂತ್ರಸ್ತರನ್ನು ಐಸಿಯುಗೆ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.