ಮೋದಿ ನಮ್ಮ ರೇಡಾರ್‌ನಲ್ಲಿದ್ದಾರೆ; ಅಯೋಧ್ಯೆ, ಮಥುರಾದಲ್ಲಿ ಬಾಂಬ್ ದಾಳಿ ನಡೆಸ್ತೀವಿ: PFIನಿಂದ ಪ್ರತೀಕರಾದ ಎಚ್ಚರಿಕೆ

ಪಿಎಫ್‌ಐ ನಿಷೇಧದಿಂದ ಪತರಗುಟ್ಟಿ ಹೋಗಿರುವ ಅದರ ಸದಸ್ಯನೊಬ್ಬ ಪ್ರಧಾನಿ ನರೇಂದ್ರ ಮೋದಿ ನಮ್ಮ ರೇಡಾರ್‌ನಲ್ಲಿದ್ದಾರೆ. ಅಲ್ಲದೆ ಅಯೋಧ್ಯೆ ಮತ್ತು ಮಥುರಾದಲ್ಲಿ ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ ಪತ್ರ ಕಳುಹಿಸಿದ್ದಾನೆ ಎಂದು ಮಹಾರಾಷ್ಟ್ರ ಬಿಜೆಪಿ ಶಾಸಕ ವಿಜಯ್ ದೇಶಮುಖ್ ಆರೋಪಿಸಿದ್ದಾರೆ.
ಪಿಎಫ್ಐ
ಪಿಎಫ್ಐ

ನವದೆಹಲಿ: ಪಿಎಫ್‌ಐ ನಿಷೇಧದಿಂದ ಪತರಗುಟ್ಟಿ ಹೋಗಿರುವ ಅದರ ಸದಸ್ಯನೊಬ್ಬ ಪ್ರಧಾನಿ ನರೇಂದ್ರ ಮೋದಿ ನಮ್ಮ ರೇಡಾರ್‌ನಲ್ಲಿದ್ದಾರೆ. ಅಲ್ಲದೆ ಅಯೋಧ್ಯೆ ಮತ್ತು ಮಥುರಾದಲ್ಲಿ ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ ಪತ್ರ ಕಳುಹಿಸಿದ್ದಾನೆ ಎಂದು ಮಹಾರಾಷ್ಟ್ರ ಬಿಜೆಪಿ ಶಾಸಕ ವಿಜಯ್ ದೇಶಮುಖ್ ಆರೋಪಿಸಿದ್ದಾರೆ.

ಬಿಜೆಪಿ ಶಾಸಕ ವಿಜಯ್ ದೇಶ್‌ಮುಖ್ ಅವರು ಪಿಎಫ್‌ಐ ಮುಖ್ಯಸ್ಥ ಮೊಹಮ್ಮದ್ ಶಫಿ ಬ್ರಜ್‌ದರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, 'ಸರ್ಕಾರದ ಪಿಎಫ್‌ಐ ನಿಷೇಧದ ಮೇಲಿನ ಕೋಪದಿಂದಾಗಿ ಅವರು ತಲೆ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಅಯೋಧ್ಯೆ ರಾಮಮಂದಿರ ಮತ್ತು ಕೃಷ್ಣ ಜನ್ಮಭೂಮಿ ಮಂದಿರದಂತಹ ಪ್ರಮುಖ ಹಿಂದೂ ದೇವಾಲಯಗಳನ್ನು ಬಾಂಬ್ ಸ್ಫೋಟಿಸುವುದಾಗಿ ಪಿಎಫ್‌ಐ ಸದಸ್ಯ ಬೆದರಿಕೆ ಹಾಕಿದ್ದಾನೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ನಾಯಕರು ತಮ್ಮ ರಾಡಾರ್‌ನಲ್ಲಿದ್ದಾರೆ ಎಂದು ಬಿಜೆಪಿ ಶಾಸಕರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸೋಲಾಪುರ ಪೊಲೀಸರು ಪತ್ರದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಗೆ ಸಂಬಂಧಿಸಿದ 93 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಕಳೆದ ತಿಂಗಳು ದಾಳಿ ನಡೆಸಿತ್ತು. ದಾಳಿಯಲ್ಲಿ ವಿವಿಧ ವಿವಾದಾತ್ಮಕ ದಾಖಲೆಗಳು, ನಗದು ಮತ್ತು ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡ ನಂತರ ಕೇಂದ್ರ ಗೃಹ ಸಚಿವಾಲಯವು PFI ಮತ್ತು ಅದರ ಸಂಬಂಧಿತ ಘಟಕಗಳ ಮೇಲೆ ಐದು ವರ್ಷಗಳ ನಿಷೇಧವನ್ನು ವಿಧಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com