ಜಾರ್ಖಂಡ್: ದುರ್ಗಾ ವಿಗ್ರಹದ ಫೋಟೋ ತೆಗೆದಿದ್ದಕ್ಕೆ ಆದಿವಾಸಿಗಳಿಗೆ ತಲೆ ಬೋಳಿಸಿ, ಹಲ್ಲೆ

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ದುರ್ಗಾ ವಿಗ್ರಹದ ಫೋಟೋ ತೆಗೆದ ವ್ಯಕ್ತಿ ಸೇರಿದಂತೆ ಐವರು ಆದಿವಾಸಿಗಳನ್ನು ಗ್ರಾಮದ ಮುಖ್ಯಸ್ಥ ಮತ್ತು ಆತನ ಕಡೆಯವರು ಥಳಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗರ್ಹ್ವಾ: ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ದುರ್ಗಾ ವಿಗ್ರಹದ ಫೋಟೋ ತೆಗೆದ ವ್ಯಕ್ತಿ ಸೇರಿದಂತೆ ಐವರು ಆದಿವಾಸಿಗಳನ್ನು ಗ್ರಾಮದ ಮುಖ್ಯಸ್ಥ ಮತ್ತು ಆತನ ಕಡೆಯವರು ಥಳಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಫೋಟೋ ತೆಗೆದ ಪ್ರಮುಖ ವ್ಯಕ್ತಿಯ ತಲೆ ಕೂದಲು ಬೋಳಿಸಲಾಗಿದೆ. ರಾಜಧಾನಿ ರಾಂಚಿಯಿಂದ 210 ಕಿಮೀ ದೂರದಲ್ಲಿರುವ ಪಾಲ್ಹೆ ಗ್ರಾಮದಲ್ಲಿ ಅಕ್ಟೋಬರ್ 6 ರಂದು ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ದುರ್ಬಲ ಬುಡಕಟ್ಟು ಗುಂಪಿಗೆ 20 ರಿಂದ 25 ವರ್ಷದೊಳಗಿನ ಐವರು ಪುರುಷರು,  ಬೀಟಾ ಪಂಚಾಯತ್‌ನ 'ಮುಖ್ಯಸ್ಥ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಬೀಟಾ ಪಂಚಾಯತ್ ಮುಖ್ಯಸ್ಥ ರಾಮೇಶ್ವರ್ ಸಿಂಗ್  ಮತ್ತು ಇತರ ಏಳು ಜನರ ವಿರುದ್ಧ ಹಲ್ಲೆಗೊಳಗಾದವರು ದೂರು ದಾಖಲಿಸಿದ್ದಾರೆ. ಆರೋಪಿಗಳ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಚಿನಿಯಾ ಪೊಲೀಸ್ ಠಾಣಾಧಿಕಾರಿ ಬಿರೇಂದ್ರ ಹನ್ಸ್ಡಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com