ಶಿವಸೇನೆಗೆ ದ್ರೋಹ ಮಾಡುವಂತೆ ಒತ್ತಡ; ಅದಕ್ಕೆ ಕಿವಿಗೊಡದ ಕಾರಣ ಜೈಲಿಗೆ ಬಂದೆ: ತಾಯಿಗೆ ಬರೆದ ಪತ್ರದಲ್ಲಿ ರಾವತ್
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸದ್ಯ ಜೈಲು ಸೇರಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ತಮ್ಮ ಪಕ್ಷಕ್ಕೆ ದ್ರೋಹ ಬಗೆಯುವಂತೆ ನನ್ನ ಮೇಲೆ ಒತ್ತಡವಿತ್ತು ಮತ್ತು ಅದಕ್ಕೆ ಕಿವಿಗೊಡದ ಕಾರಣ ಜೈಲಿಗೆ ಬಂದಿದ್ದೇನೆ...
Published: 12th October 2022 11:38 PM | Last Updated: 04th November 2022 11:33 AM | A+A A-

ಸಂಜಯ್ ರಾವತ್
ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸದ್ಯ ಜೈಲು ಸೇರಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ತಮ್ಮ ಪಕ್ಷಕ್ಕೆ ದ್ರೋಹ ಬಗೆಯುವಂತೆ ನನ್ನ ಮೇಲೆ ಒತ್ತಡವಿತ್ತು ಮತ್ತು ಅದಕ್ಕೆ ಕಿವಿಗೊಡದ ಕಾರಣ ಜೈಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಬಂಧನಕ್ಕೊಳಗಾದ ಒಂದು ವಾರದ ನಂತರ ಆಗಸ್ಟ್ 8 ರಂದು ತನ್ನ ತಾಯಿಗೆ ಬರೆದ ಪತ್ರದಲ್ಲಿ ರಾವತ್ ಅವರು, ಶಿವಸೇನೆಗೆ ದ್ರೋಹ ಬಗೆಯುವಂತೆ ನನ್ನ ಮೇಲೆ ಒತ್ತಡವಿತ್ತು. ಆದರೆ ಅದಕ್ಕೆ ಕಿವಿಗೊಡದ ಕಾರಣ ನಾನು ಜೈಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ತಮ್ಮನ್ನು ಸುಳ್ಳು ಮತ್ತು ಬೋಗಸ್ ಆರೋಪದಡಿಯಲ್ಲಿ ಬಂಧಿಸಲಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ಗನ್ ಪಾಯಿಂಟ್‌ನಲ್ಲಿ ನನ್ನಿಂದ ಹೇಳಿಕೆಗಳನ್ನು ಪಡೆಯಲಾಗಿದೆ ಎಂದು ರಾವತ್ ಆರೋಪಿಸಿದ್ದಾರೆ.
ಇದನ್ನು ಓದಿ: ಹಣ ಅಕ್ರಮ ವರ್ಗಾವಣೆ ಪ್ರಕರಣ: ಸೆಪ್ಟೆಂಬರ್ 19ರವರೆಗೆ ಸಂಜಯ್ ರಾವತ್‌ಗೆ ಜೈಲೇ ಗತಿ!
ಮುಂಬೈನಲ್ಲಿನ ಪತ್ರಾ 'ಚಾಲ್' ಮರುಅಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯ(ಇಡಿ) ರಾವತ್ ಅವರನ್ನು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.