ಎಂಎನ್ಎಸ್ ಗೆ ಉತ್ತರ ಭಾರತದ 200 ಮಂದಿ ಸೇರ್ಪಡೆ 

ಮಹಾರಾಷ್ಟ್ರದಲ್ಲಿ ಕಟ್ಟರ್ ಮರಾಠಿ ಸಂಘಟನೆಗಳ ಪೈಕಿ ಗುರುತಿಸಿಕೊಂಡಿದ್ದ ಎಂಎನ್ಎಸ್ ಗೆ 200 ಮಂದಿ ಉತ್ತರ ಭಾರತೀಯರು ಸೇರ್ಪಡೆಗೊಂಡಿದ್ದಾರೆ.
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ಕಟ್ಟರ್ ಮರಾಠಿ ಸಂಘಟನೆಗಳ ಪೈಕಿ ಗುರುತಿಸಿಕೊಂಡಿದ್ದ ಎಂಎನ್ಎಸ್ ಗೆ 200 ಮಂದಿ ಉತ್ತರ ಭಾರತೀಯರು ಸೇರ್ಪಡೆಗೊಂಡಿದ್ದಾರೆ. ಕಲ್ಯಾಣ್ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಉತ್ತರ ಭಾರತೀಯ ಸಮುದಾಯರು ಎಂಎನ್ಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿನ ಇತ್ತೀಚಿನ ರಾಜಕೀಯದಿಂದ ಬೇಸತ್ತು ಎಂಎನ್ಎಸ್ ಸೇರ್ಪಡೆಯಾಗುತ್ತಿರುವುದಾಗಿ ಅವರು ಹೇಳಿದ್ದಾರೆ. 

ಮಹಾರಾಷ್ಟ್ರದಲ್ಲಿ ಉತ್ತರ ಭಾರತೀಯರನ್ನು ಸೆಳೆಯುವುದಕ್ಕೆ ಶಿವಸೇನೆಯ ಎರಡೂ ಬಣಗಳು ಯತ್ನಿಸುತ್ತಿವೆ. ಆದರೆ ಉತ್ತರ ಭಾರತೀಯ ಸಮುದಾಯ ಎಂಎನ್ಎಸ್ ನತ್ತ ಒಲವು ಹೊಂದಿರುವಂತಿದೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಂದಿ ಹೇಳಿದ್ದಾರೆ. 

ರೈಲ್ವೆಯಲ್ಲಿ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎಂಎನ್ಎಸ್ ಈ ಹಿಂದೆ ಉತ್ತರ ಭಾರತೀಯರ ವಿರುದ್ಧ ಪ್ರತಿಭಟನೆ ನಡೆಸಿದ ಉದಾಹರಣೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com