ಪ್ರಧಾನಿ ಮೋದಿ ಒಬ್ಬ ಡುಪ್ಲಿಕೇಟ್, ಒರಿಜಿನಲ್ ಅಲ್ಲ: ಜೆಡಿಯು ರಾಷ್ಟ್ರಾಧ್ಯಕ್ಷ ಲಲನ್ ಸಿಂಗ್

ತಮ್ಮ ಎದುರು ಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ರಾಜಕೀಯ ನಾಯಕರು ಹಲವು ಬಾರಿ ನಾಲಿಗೆಯನ್ನು ಬೇಕಾಬಿಟ್ಟಿ ಹರಿಯಬಿಡುತ್ತಾರೆ. ಪ್ರಧಾನಿ ಮೋದಿಯನ್ನು ಟೀಕಿಸುವವರು ಹಲವರಿದ್ದಾರೆ. 
ಲಲನ್ ಸಿಂಗ್
ಲಲನ್ ಸಿಂಗ್

ಪಾಟ್ನಾ: ತಮ್ಮ ಎದುರು ಪಕ್ಷದ ನಾಯಕರನ್ನು ಟೀಕಿಸುವ ಭರದಲ್ಲಿ ರಾಜಕೀಯ ನಾಯಕರು ಹಲವು ಬಾರಿ ನಾಲಿಗೆಯನ್ನು ಬೇಕಾಬಿಟ್ಟಿ ಹರಿಯಬಿಡುತ್ತಾರೆ. ಪ್ರಧಾನಿ ಮೋದಿಯನ್ನು ಟೀಕಿಸುವವರು ಹಲವರಿದ್ದಾರೆ. 

ನಿನ್ನೆಯಷ್ಟೇ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿಯವರ 100 ವರ್ಷದ ತಾಯಿ ಹಿರಾಬೆನ್ ಅವರನ್ನು ಅವಮಾನಿಸಿದ್ದಕ್ಕೆ ಹರಿಹಾಯ್ದಿದ್ದರು. ಮುಂಬರುವ ಚುನಾವಣೆಯಲ್ಲಿ ಗುಜರಾತ್ ಜನತೆ ಅರವಿಂದ್ ಕೇಜ್ರಿವಾಲ್ ಗೆ ಒಂದು ದೊಡ್ಡ ಪಾಠ ಕಲಿಸುತ್ತಾರೆ ಎಂದು ಹೇಳಿದ್ದರು. 

ಇದೀಗ ಮತ್ತೊಬ್ಬ ನಾಯಕ, ಬಿಹಾರದ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ನಿನ್ನೆ ಪಾಟ್ನಾದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿಯವರ ಜಾತಿಯ ಬಗ್ಗೆ ಮಾತನಾಡುತ್ತಾ ಕೀಳುಮಟ್ಟದ ಮಾತುಗಳನ್ನು ಆಡಿದ್ದಾರೆ.

2014ರಲ್ಲಿ ಮೋದಿಯವರು ಲೋಕಸಭೆ ಚುನಾವಣೆಗೆ ಮುನ್ನ ದೇಶವನ್ನು ಸಂಚಾರ ಮಾಡುತ್ತಿರುವ ತಾವು ಅತಿ ಹಿಂದುಳಿದ ವರ್ಗದಿಂದ(EBC) ಬಂದವರು ಎಂದು ಹೇಳುತ್ತಿದ್ದರು. ಗುಜರಾತ್ ನಲ್ಲಿ ಇಬಿಸಿ ವರ್ಗವೆಂಬುದು ಇಲ್ಲ ಒಬಿಸಿ ವರ್ಗ ಮಾತ್ರ ಇದೆ. ಅವರು ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ತಮ್ಮ ಜಾತಿ ಒಬಿಸಿ ಎಂದು ಸೇರಿಸಿದ್ದರು. ಹಾಗಾದರೆ ಮೋದಿ ಹೇಳುತ್ತಿರುವುದು ಸುಳ್ಳೇ? ಮೋದಿ ಒರಿಜಿನಲ್ ಅಲ್ಲ, ಪಕ್ಕಾ ಡುಪ್ಲಿಕೇಟ್ ಎಂದು ಲಲನ್ ಸಿಂಗ್ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com