ಮಧ್ಯ ಪ್ರದೇಶ ಸಿಎಂ ಹೇಳಿಕೆ ಬೆನ್ನಲ್ಲೇ ಪ್ರಿಸ್ಕ್ರಿಪ್ಷನ್ ಮೇಲೆ ಹಿಂದಿಯಲ್ಲಿ 'ಶ್ರೀ ಹರಿ' ಎಂದು ಬರೆದ ಸರ್ಕಾರಿ ವೈದ್ಯ!

ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರು ಪ್ರಿಸ್ಕ್ರಿಪ್ಷನ್ ನಲ್ಲಿ ಹಿಂದಿಯಲ್ಲಿ ‘ಶ್ರೀ ಹರಿ’ ಎಂದು ಬರೆಯುವ ಮೂಲಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಾತ್ನಾ: ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರು ಪ್ರಿಸ್ಕ್ರಿಪ್ಷನ್ ನಲ್ಲಿ ಹಿಂದಿಯಲ್ಲಿ ‘ಶ್ರೀ ಹರಿ’ ಎಂದು ಬರೆಯುವ ಮೂಲಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ ದಿನವೇ, ಕೋಟಾರ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ವೈದ್ಯಕೀಯ ಅಧಿಕಾರಿ ಡಾ.ಸರ್ವೇಶ್ ಸಿಂಗ್ ಬರೆದ ಪ್ರಿಸ್ಕ್ರಿಪ್ಷನ್ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಭಾಷಣದಲ್ಲಿ, ವೈದ್ಯರು ಪ್ರಿಸ್ಕ್ರಿಪ್ಷನ್ ಸ್ಲಿಪ್‌ಗಳ ಮೇಲೆ Rx (ಲ್ಯಾಟಿನ್ ಪದದಿಂದ ಪಡೆದ ಚಿಹ್ನೆ) ಬದಲಿಗೆ 'ಶ್ರೀ ಹರಿ' ಎಂದು ಬರೆಯಬಹುದು ಎಂದು ಹೇಳಿದ್ದರು.

2017 ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಡಾ.ಸರ್ವೇಶ್ ಸಿಂಗ್ ಅವರು ಪಠ್ಯಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಟೀವಿಯಲ್ಲಿ ವೀಕ್ಷಿಸುತ್ತಿದ್ದರು. ಈ ವೇಳೆ ಅಲ್ಲಿದ್ದ ಕೆಲವರು ಹಿಂದಿಯಲ್ಲಿ ಪ್ರಿಸ್ಕ್ರಿಪ್ಷನ್ ಬರೆಯುವಂತೆ ವೈದ್ಯರಿಗೆ ಒತ್ತಾಯಿಸಿದರು ಮತ್ತು ಅದೇ ದಿನ ಅವರು ಸಿಎಂ ಹೇಳಿಕೆಯನ್ನು ತರಲು ನಿರ್ಧರಿಸಿದರು.

"ಭಾನುವಾರ ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ಮೊದಲ ರೋಗಿ ರಶ್ಮಿ ಸಿಂಗ್ ಅವರಿಗೆ ಬರೆದ ಪ್ರಿಸ್ಕ್ರಿಪ್ಷನ್ ನಲ್ಲಿ ನಾನು Rx ಬದಲಿಗೆ 'ಶ್ರೀ ಹರಿ' ಎಂದು ಬರೆದೆ. ನಂತರ ಔಷಧಿಗಳ ಹೆಸರನ್ನು ಹಿಂದಿಯಲ್ಲಿ ಪಟ್ಟಿ ಮಾಡಿದೆ" ಮತ್ತು ರೋಗಿಯ ಇತಿಹಾಸವನ್ನು ಹಿಂದಿಯಲ್ಲಿ ಬರೆದೆ ಎಂದು  ಎಂದು ಡಾ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com