ಘಾಜಿಯಾಬಾದ್ ನಲ್ಲಿ ಪಿಟ್ ಬುಲ್ ಸೇರಿದಂತೆ 3 ತಳಿಗಳಿಗೆ ನಿಷೇಧ; 1 ಕ್ಕಿಂತ ಹೆಚ್ಚು ನಾಯಿ ಇರುವಂತಿಲ್ಲ!

ಇತ್ತೀಚಿನ ದಿನಗಳಲ್ಲಿ ಪಿಟ್ ಬುಲ್ ತಳಿಯ ನಾಯಿಗಳು ಮಾರಣಾಂತಿಕ ದಾಳಿ ನಡೆಸುತ್ತಿರುವುದು ವರದಿಯಾಗುತ್ತಿದ್ದು, ಘಾಜಿಯಾಬಾದ್ ಸ್ಥಳೀಯ ಆಡಳಿತ ಪಿಟ್ ಬುಲ್ ಸೇರಿದಂತೆ 3 ತಳಿಗಳಿಗೆ ನಿಷೇಧ ವಿಧಿಸಿದೆ. 
ಪಿಟ್ ಬುಲ್ ದಾಳಿ (ಸಂಗ್ರಹ ಚಿತ್ರ)
ಪಿಟ್ ಬುಲ್ ದಾಳಿ (ಸಂಗ್ರಹ ಚಿತ್ರ)

ಘಾಜಿಯಾಬಾದ್: ಇತ್ತೀಚಿನ ದಿನಗಳಲ್ಲಿ ಪಿಟ್ ಬುಲ್ ತಳಿಯ ನಾಯಿಗಳು ಮಾರಣಾಂತಿಕ ದಾಳಿ ನಡೆಸುತ್ತಿರುವುದು ವರದಿಯಾಗುತ್ತಿದ್ದು, ಘಾಜಿಯಾಬಾದ್ ಸ್ಥಳೀಯ ಆಡಳಿತ ಪಿಟ್ ಬುಲ್ ಸೇರಿದಂತೆ 3 ತಳಿಗಳಿಗೆ ನಿಷೇಧ ವಿಧಿಸಿದೆ. 

ನಗರದಲ್ಲಿ ಪಿಟ್ ಬುಲ್ ತಳಿಯ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಷ್ಟೇ ಅಲ್ಲದೇ ಒಂದು ಕುಟುಂಬ ಒಂದು ನಾಯಿಯನ್ನು ಸಾಕಿಕೊಳ್ಳುವುದಕ್ಕೆ ಮಾತ್ರ ಅವಕಾಶವಿರಲಿದೆ. 

ಸಾಕು ನಾಯಿಗಳಿಂದ ದಾಳಿಗಳು ಹೆಚ್ಚುತ್ತಿರುವ ಪ್ರಕರಣದ ಹಿನ್ನೆಲೆಯಲ್ಲಿ ಘಾಜಿಯಾಬಾದ್ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.

ಪಿಟ್ಬುಲ್, ರೊಟ್ವೀಲರ್ ಮತ್ತು ಡೊಗೊ ಅರ್ಜೆಂಟಿನೋ ತಳಿಗಳ ನಾಯಿಗಳನ್ನು ಸಾಕುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. 

ನ.1 ರಿಂದ ನಾಯಿ ಸಾಕುವುದಕ್ಕೆ ಮಾಲಿಕರಿಗೆ ಪರವಾನಗಿ ನೀಡಲಾಗುತ್ತದೆ ಹಾಗೂ ಈಗಾಗಲೇ ನಾಯಿ ಸಾಕುತ್ತಿರುವ ಮಾಲಿಕರಿಗೆ ನೋಂದಣಿ ಮಾಡಿಕೊಳ್ಳುವುದಕ್ಕೆ 2 ತಿಂಗಳ ಅವಕಾಶ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com