ದೇಶದ ಹಲವು ರಾಜ್ಯಗಳಲ್ಲಿ ಎನ್ಐಎ ದಾಳಿ, ಭಯೋತ್ಪಾದಕರು, ಸ್ಮಗ್ಲರ್ ಗಳ ಕುಕೃತ್ಯಗಳನ್ನು ಮಟ್ಟಹಾಕಲು ಕ್ರಮ

ರಾಷ್ಟ್ರೀಯ ತನಿಖಾ ದಳ(NIA) ದೇಶದ ಹಲವು ಭಾಗಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರೀಯ ತನಿಖಾ ದಳ(NIA) ದೇಶದ 50ಕ್ಕೂ ಹೆಚ್ಚು ಭಾಗಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. 

ಪಂಜಾಬ್ ರಾಜ್ಯದ 9 ಕಡೆಗಳಲ್ಲಿ, ಹರ್ಯಾಣ, ರಾಜಸ್ತಾನ ಮತ್ತು ದೆಹಲಿ-ಎನ್ ಸಿಆರ್ ವಲಯಗಳಲ್ಲಿ ಈ ದಾಳಿ ನಡೆದಿದೆ. ಭಾರತ ಮತ್ತು ವಿದೇಶಗಳಲ್ಲಿ ನೆಲೆಯೂರಿರುವ ಅಂತಾರಾಷ್ಟ್ರೀಯ ಸ್ಮಗ್ಲರ್ ಗಳು, ದರೋಡೆಕೋರರು, ಭಯೋತ್ಪಾದಕರು, ಗ್ಯಾಂಗ್ ಸ್ಟರ್ ಕುತೃತ್ಯಗಳನ್ನು ಪತ್ತೆಹಚ್ಚಿ ಮಟ್ಟಹಾಕಲು ಈ ದಾಳಿ ನಡೆಯುತ್ತಿದೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.

ಮೊನ್ನೆ ಅಕ್ಟೋಬರ್ 14ರಂದು ರಾಷ್ಟ್ರೀಯ ತನಿಖಾ ದಳ ಡ್ರೋನ್ ಪೂರೈಕೆ ಕೇಸಿಗೆ ಸಂಬಂಧಪಟ್ಟಂತೆ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆ ಸೇರಿ ಹಲವು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಈ ಪ್ರಕರಣದಲ್ಲಿ ಇದುವರೆಗೆ ಯಾರ ಬಂಧನವೂ ಆಗಿಲ್ಲ.

ಕಳೆದ 9 ತಿಂಗಳಲ್ಲಿ ಭದ್ರತಾ ಪಡೆ ನೆರೆಯ ಪಾಕಿಸ್ತಾನದಿಂದ ಭಾರತದ ಪ್ರದೇಶದೊಳಗೆ 191 ಡ್ರೋನ್ ಗಳು ಅಕ್ರಮವಾಗಿ ಪ್ರವೇಶಿಸಿದ್ದನ್ನು ಪತ್ತೆಹಚ್ಚಿತ್ತು. ಇದರಿಂದ ದೇಶದ ಆಂತರಿಕ ಭದ್ರತೆ ವಿಚಾರದಲ್ಲಿ ತೀವ್ರ ಆತಂಕ ಉಂಟಾಗಿದೆ.

ಇಂತಹ ಅನಧಿಕೃತ ಪ್ರವೇಶಗಳು ಆಗಾಗ ಆಗುತ್ತಿರುತ್ತದೆ ಎಂದು ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಪಡೆಗಳು ನೀಡಿದ್ದ ಮಾಹಿತಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹಂಚಿಕೊಂಡಿತ್ತು. ನಿನ್ನೆ ಸೋಮವಾರ ಗಡಿ ಭದ್ರತಾ ಪಡೆ ಪಂಜಾಬ್ ನ ಅಮೃತಸರ್ ವಲಯದೊಳಗೆ ಪಾಕಿಸ್ತಾನದಿಂದ ಪ್ರವೇಶವಾಗಿದ್ದ ಡ್ರೋನ್ ನ್ನು ಹೊಡೆದುರುಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com