ಹಿಂಗಾರು ಬೆಳೆಗಳಿಗೆ ಎಂಎಸ್ ಪಿ ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಅನುಮೋದನೆ
2023-24ನೇ ಸಾಲಿನ ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.
Published: 19th October 2022 12:58 AM | Last Updated: 19th October 2022 01:18 PM | A+A A-

ಪ್ರಧಾನಿ ನರೇಂದ್ರ ಮೋದಿ ಸಾಂದರ್ಭಿಕ ಚಿತ್ರ
ನವದೆಹಲಿ: 2023-24ನೇ ಸಾಲಿನ ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.
ನೂತನ ಅನುಮೋದಿತ ಪಟ್ಟಿಯ ಪ್ರಕಾರ ಗೋಧಿಗೆ ರೂ. 110, ಬಾರ್ಲಿಗೆ 100 ರೂ. ಕಡಲೆ ಬೇಳೆಗೆ 105, ಮಸೂರ್ ದಾಲ್ ಗೆ 500, ಸಾಸಿವೆ ಕಾಳಿಗೆ 400, ಕೇಸರಿಗೆ 209 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಸೂರ್ ದಾಲ್ ಗೆ ಅತಿ ಹೆಚ್ಚು 500 ರೂ. ಬೆಂಬಲ ಬೆಲೆ ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ @narendramodi ಅವರ ನೇತೃತ್ವದ ಸಚಿವ ಸಂಪುಟವು 2023-24ನೇ ಸಾಲಿನ ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿ ಅನುಮೋದನೆ ನೀಡಿದೆ. ನೂತನ ಅನುಮೋದಿತ ಪಟ್ಟಿಯ ಪ್ರಕಾರ ಗರಿಷ್ಠ ಬೆಂಬಲ ಬೆಲೆ ಮಸೂರ್ ದಾಲ್ಗೆ ಹೆಚ್ಚುವರಿಯಾಗಿ ₹500#CabinetDecisions pic.twitter.com/hWBtJLij0g
— Pralhad Joshi (@JoshiPralhad) October 18, 2022