ಅಸ್ಸಾಂನ ಇನ್ನೂ 8 ಜಿಲ್ಲೆಗಳು ಮತ್ತು ಒಂದು ಉಪವಿಭಾಗದಲ್ಲಿ ಎಎಫ್ಎಸ್ ಪಿಎ ವಿಸ್ತರಣೆ

ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಪರಿಶೀಲಿಸಿದ ನಂತರ ಎಂಟು ಜಿಲ್ಲೆಗಳು ಮತ್ತು ಒಂದು ಉಪವಿಭಾಗದಲ್ಲಿ ಸಶಸ್ತ್ರ ಪಡೆಗಳ(ವಿಶೇಷ ಅಧಿಕಾರ) ಕಾಯಿದೆ, 1958(AFSPA) ಅನ್ನು ಆರು ತಿಂಗಳವರೆಗೆ ವಿಸ್ತರಿಸಿರುವುದಾಗಿ ಅಸ್ಸಾಂ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹಟಿ: ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಪರಿಶೀಲಿಸಿದ ನಂತರ ಎಂಟು ಜಿಲ್ಲೆಗಳು ಮತ್ತು ಒಂದು ಉಪವಿಭಾಗದಲ್ಲಿ ಸಶಸ್ತ್ರ ಪಡೆಗಳ(ವಿಶೇಷ ಅಧಿಕಾರ) ಕಾಯಿದೆ, 1958(AFSPA) ಅನ್ನು ಆರು ತಿಂಗಳವರೆಗೆ ವಿಸ್ತರಿಸಿರುವುದಾಗಿ ಅಸ್ಸಾಂ ಸರ್ಕಾರ ಗುರುವಾರ ತಿಳಿಸಿದೆ.

ಆದಾಗ್ಯೂ ಅಲ್ಲಿನ ಪರಿಸ್ಥಿತಿಯು "ಗಣನೀಯವಾಗಿ ಸುಧಾರಿಸಿದೆ" ಎಂದು ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಿಂದ ವಿವಾದಾತ್ಮಕ ಕಾನೂನನ್ನು ಸರ್ಕಾರ ಹಿಂತೆಗೆದುಕೊಂಡಿದೆ.

ಎಎಫ್ಎಸ್ ಪಿಎನ ಆರು ತಿಂಗಳ ವಿಸ್ತರಣೆಯು ಅಕ್ಟೋಬರ್ 1 ರಿಂದ ಜಾರಿಗೆ ಬರುತ್ತದೆ ಎಂದು ಗೃಹ ಮತ್ತು ರಾಜಕೀಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀರಜ್ ವರ್ಮಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ಆದೇಶದ ನಂತರ ಮತ್ತು ರಾಜ್ಯದ ಉಳಿದ ಭಾಗಗಳಿಂದ ಎಎಫ್ಎಸ್ ಪಿಎ ಕಾನೂನನ್ನು ಹಿಂತೆಗೆದುಕೊಂಡ ನಂತರ ಒಟ್ಟು ಒಂಬತ್ತು ಜಿಲ್ಲೆಗಳು ಮತ್ತು ಒಂದು ಉಪ-ವಿಭಾಗವನ್ನು ಎಎಫ್ಎಸ್ ಪಿಎ ಅಡಿಯಲ್ಲಿ ಇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com