ಲೋಕಸಭೆ ಭದ್ರತಾ ವಿಭಾಗದ ನಿವೃತ್ತ ಅಧಿಕಾರಿಗೆ 1 ಕೋಟಿ ರೂ. ವಂಚನೆ
ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುವ ನೆಪದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂದು ಲೋಕಸಭೆಯ ಭದ್ರತಾ ವಿಭಾಗದ ನಿವೃತ್ತ ಉಪನಿರ್ದೇಶಕರೊಬ್ಬರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Published: 20th October 2022 11:30 PM | Last Updated: 21st October 2022 02:14 PM | A+A A-

ಸಾಂದರ್ಭಿಕ ಚಿತ್ರ
ಗುರುಗ್ರಾಮ್: ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುವ ನೆಪದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂದು ಲೋಕಸಭೆಯ ಭದ್ರತಾ ವಿಭಾಗದ ನಿವೃತ್ತ ಉಪನಿರ್ದೇಶಕರೊಬ್ಬರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೆಕ್ಟರ್ 43 ರ ನಿವಾಸಿ ಬಿಎಲ್ ಅಹುಜಾ (83) ಅವರು ನವೆಂಬರ್ 2000 ರಲ್ಲಿ ಲೋಕಸಭೆಯಲ್ಲಿ ಉಪ ನಿರ್ದೇಶಕರಾಗಿ (ಭದ್ರತೆ) ನಿವೃತ್ತರಾಗಿದ್ದಾರೆ.
ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಅಭಿಷೇಕ್ ಮಹೇಶ್ವರಿ ಮತ್ತು ಅವರ ಪತ್ನಿ ತಮ್ಮನ್ನು ವಂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಹುಜಾ ಐಸಿಐಸಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ 2013 ರಿಂದ ಮಹೇಶ್ವರಿ ತಿಳಿದಿದ್ದು, ಹಣವನ್ನು ಬ್ಯಾಂಕಿನಲ್ಲಿ ಇಡುವ ಬದಲು ಮ್ಯೂಚುವಲ್ ಫಂಡ್‌ಗಳಲ್ಲಿ ಹಾಕುವಂತೆ ಸಲಹೆ ನೀಡಿದ್ದಾರೆ. ತದ ನಂತರ 2018 ರಲ್ಲಿ 1 ಕೋಟಿ ಮೌಲ್ಯದ ಎರಡು ಚೆಕ್‌ಗಳನ್ನು ನೀಡಿದ್ದು, ಮಾರ್ಚ್ 2019 ರಲ್ಲಿ ವಿಪ್ರೋ ಷೇರುಗಳಲ್ಲಿ ಹೂಡಿಕೆ ಮಾಡಲು 30 ಲಕ್ಷದ ಮತ್ತೊಂದು ಚೆಕ್ ನೀಡಿರುವುದಾಗಿ ಅಹುಜಾ ಹೇಳಿದ್ದಾರೆ.
ಯುಎಸ್‌ನಲ್ಲಿ ವಾಸಿಸುತ್ತಿರುವ ಅಹುಜಾ ಅವರ ಮಗ ಮಹೇಶ್ವರಿ ಅವರನ್ನು ಹೂಡಿಕೆಯ ಸ್ಥಿತಿಯ ಬಗ್ಗೆ ಪದೇ ಪದೇ ಕೇಳಿದಾಗ ನಕಲಿ ದಾಖಲೆ ನೀಡಲಾಯಿತು ಎಂದು ಆರೋಪಿಸಲಾಗಿದೆ. ದಂಪತಿಗಳ ವಿರುದ್ಧ ಸೆಕ್ಷನ್ 420 (ವಂಚನೆ), 467, 468 (ವಂಚನೆಯ ಉದ್ದೇಶಕ್ಕಾಗಿ ನಕಲಿ) 471 (ನಕಲಿ ದಾಖಲೆ ಬಳಸಿ), 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ವಾಸ್ತವಾಂಶವನ್ನು ಪರಿಶೀಲಿಸುತ್ತಿದ್ದೇವೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸುಶಾಂತ್ ಲೋಕ ಪೊಲೀಸ್ ಠಾಣೆಯ ಎಸ್‌ಎಚ್‌ಒ ದೀಪಕ್ ಕುಮಾರ್ ತಿಳಿಸಿದ್ದಾರೆ.