ಮುಂಬೈ: ಲಕ್ಸುರಿ ಹೋಟೆಲ್ ಸ್ಫೋಟಿಸುವ ಬೆದರಿಕೆ, ಆರೋಪಿ ಬಂಧನ

ವಾಣಿಜ್ಯ ನಗರಿ ಮುಂಬೈನ ಲಕ್ಸುರಿ ಹೋಟೆಲ್ ವೊಂದನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಲಕ್ಸುರಿ ಹೋಟೆಲ್ ವೊಂದನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮುಂಬೈ ಹೊರವಲಯ ವಾಕೊಲಾದಲ್ಲಿರುವ ಲಕ್ಸುರಿ ಹೋಟೆಲ್ ಸ್ಫೋಟಿಸುವುದಾಗಿ ಗುರುವಾರ ರಾತ್ರಿ 8-49ಕ್ಕೆ ಕರೆ ಬಂದಿದೆ. ನಂತರ ಆರೋಪಿಯ ಹುಡುಕಾಟ ನಡೆಸಿದ ತನಿಖಾ ತಂಡ ಕರೆ ವಿವರ ಮತ್ತು ಮೊಬೈಲ್ ಟವರ್ ಸಂಗ್ರಹಿಸಿ ಆರೋಪಿಸಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ತನಿಖೆ ವೇಳೆ ಆರೋಪಿ ಮದ್ಯವ್ಯಸನಿ ಎಂಬುದು ತಿಳಿದುಬಂದಿದೆ. ಈ ಹಿಂದೆ ಮುಂಬೈ ವಿಶ್ವವಿದ್ಯಾನಿಲಯಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ. ಆತನ ವಿರುದ್ಧ ಬಿಕೆಸಿ ಮತ್ತು ವಾಕೊಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಂಗಳವಾರ ಅಂದೇರಿಯಲ್ಲಿರುವ ಮಾಲ್, ಜುಹುನಲ್ಲಿರುವ ಮಲ್ಟಿಪ್ಲೆಕ್ಸ್ ಮತ್ತು ವಿಮಾನ ನಿಲ್ದಾಣ ಬಳಿಯ ಹೋಟೆಲ್ ವೊಂದರಲ್ಲಿ ಬಾಂಬ್ ಸ್ಫೋಟಗೊಳ್ಳುವುದಾಗಿ ನವಿ ಮುಂಬೈಯಿಂದ ಸಹಾಯವಾಣಿ 112ಕ್ಕೆ ಕರೆ ಬಂದಿತ್ತು. ಈ ಪ್ರಕರಣಗಳ ಸಂಬಂಧ ತನಿಖೆ ಮುಂದುವರೆದಿದೆ. ಇಂತಹ ಹುಸಿ ಕರೆಗಳ ಬಗ್ಗೆ ಜನರು ಆತಂಕಗೊಳಬಾರದು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com