ಖರ್ಗೆ ನೇತೃತ್ವದ ಹೊಸ ತಂಡ ಸೇರಲು ಲಾಬಿ ಶುರು: ಅಕ್ಟೋಬರ್ 26 ರಂದು ಸೋನಿಯಾ ಗಾಂಧಿಯಿಂದ ಅಧಿಕಾರ ಹಸ್ತಾಂತರ!

ಹೊಸದಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅಕ್ಟೋಬರ್ 26 ರಂದು ಸೋನಿಯಾ ಗಾಂಧಿ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ, ನೇಮಕದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಇಲಾಖೆಗಳು ಮತ್ತು ಕೋಶಗಳು ಸೇರಿದಂತೆ ಸಾಂಸ್ಥಿಕ ಸಂಸ್ಥೆಗಳ ಸಂಪೂರ್ಣ ಪುನರ್ ನಿರ್ಮಾಣವಾಗಲಿದೆ..
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಸಾಮಾನ್ಯ ದಲಿತ ಕುಟುಂಬದಿಂದ ಬಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಎಂದರೆ ಅದು ಸಾಮಾನ್ಯ ವಿಷಯವೇನೂ ಅಲ್ಲ. ಅದರ ಜೊತೆಗೆ ದೇಶಾದ್ಯಂತ ಮಕಾಡೆ ಮಲಗಿರುವ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವುದು ಖರ್ಗೆ ಮುಂದಿರುವ ಬಹುದೊಡ್ಡ ಸವಾಲಾಗಿದೆ.

ಹೊಸದಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅಕ್ಟೋಬರ್ 26 ರಂದು ಸೋನಿಯಾ ಗಾಂಧಿ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ, ನೇಮಕದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಇಲಾಖೆಗಳು ಮತ್ತು ಕೋಶಗಳು ಸೇರಿದಂತೆ ಸಾಂಸ್ಥಿಕ ಸಂಸ್ಥೆಗಳ ಸಂಪೂರ್ಣ ಪುನರ್ ನಿರ್ಮಾಣವಾಗಲಿದೆ..

ಎಐಸಿಸಿಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಸೇರಿದಂತೆ ಹೊಸ ತಂಡವನ್ನು ಖರ್ಗೆ ಆಯ್ಕೆ ಮಾಡಲಿದ್ದಾರೆ. ಸದ್ಯ ಕೆ.ಸಿ.ವೇಣುಗೋಪಾಲ್ ಅವರು ನಿರ್ವಹಿಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸ್ಥಾನಕ್ಕೆ ಲಾಬಿ ಆರಂಭವಾಗಿದೆ.

ಎಐಸಿಸಿಗೆ ಕರ್ನಾಟಕದ ಅಧ್ಯಕ್ಷರಾಗಿರುವುದರಿಂದ ಉತ್ತರ ಭಾರತದ ನಾಯಕನಿಗೆ ಈ ಹುದ್ದೆ ಹೋಗಬಹುದು. ಪಕ್ಷದ ವಿಷಯಗಳಲ್ಲಿ ಪ್ರಭಾವವನ್ನು ಮುಂದುವರಿಸುವ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೇರಳವನ್ನು ಪ್ರತಿನಿಧಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಖರ್ಗೆ ಅವರು ಅಧಿಕಾರ ವಹಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಹುಲ್ ಭಾರತ್ ಜೋಡೋ ಯಾತ್ರೆಯಿಂದ ಎರಡು ದಿನಗಳ ವಿರಾಮ ತೆಗೆದುಕೊಳ್ಳಲಿದ್ದಾರೆ. ವರ್ಷದ ಅಂತ್ಯದ ಮೊದಲು ಖರ್ಗೆ ಅವರು ಎಐಸಿಸಿ ಸರ್ವಸದಸ್ಯರ ಸಭೆ ಕರೆಯುವ ನಿರೀಕ್ಷೆಯಿದೆ, ಅಲ್ಲಿ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ 12 ಹೊಸ ಸದಸ್ಯರನ್ನು ಆಯ್ಕೆ ಮಾಡಲು CWC ಚುನಾವಣೆ ನಡೆಯಲಿದೆ.

ಸಿಡಬ್ಲ್ಯೂಸಿ ಸದಸ್ಯರನ್ನು ಸುಮಾರು 1,400 ಎಐಸಿಸಿ ಸದಸ್ಯರು ಚುನಾಯಿಸುತ್ತಾರೆ, ಅವರು ಪ್ಲೀನರಿಯಲ್ಲಿ ಭಾಗವಹಿಸುತ್ತಾರೆ. ಸಿಡಬ್ಲ್ಯುಸಿ ಚುನಾವಣೆಗೆ ತಮ್ಮ ತಂಡವನ್ನು ಒಟ್ಟುಗೂಡಿಸುವ ಸಲುವಾಗಿ ಪಕ್ಷದ ಪ್ಲೀನರಿಗೂ ಮುನ್ನ ಖರ್ಗೆ ಅವರು ಎಐಸಿಸಿಯಲ್ಲಿ ಕೆಲವು ಉನ್ನತ  ಹುದ್ದೆಗಳ ನೇಮಕಾತಿಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಗಾಂಧಿ ಕುಟುಂಬ ಮತ್ತು ಖರ್ಗೆ ಅವರು ಸಿಡಬ್ಲ್ಯುಸಿಗೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಅವಕಾಶ ನೀಡಿದರೆ, ಹೆಚ್ಚಿನ ಸಂಖ್ಯೆಯ ಹಾಲಿ ಸದಸ್ಯರು  ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು. CWC ಕಾಂಗ್ರೆಸ್ ಅಧ್ಯಕ್ಷರಲ್ಲದೆ 23 ಸದಸ್ಯರನ್ನು ಹೊಂದಿದೆ. ಅವರಲ್ಲಿ ಹನ್ನೆರಡು ಮಂದಿ ಚುನಾಯಿತರಾಗಿದ್ದರೆ ಉಳಿದವರು ನಾಮನಿರ್ದೇಶನಗೊಂಡಿದ್ದಾರೆ.

ರಾಜ್ಯಗಳ ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲೂ ಖರ್ಗೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಕೇಂದ್ರ ವೀಕ್ಷಕರನ್ನು ಭೇಟಿಯಾಗದಂತೆ ರಾಜ್ಯದ ಶಾಸಕರನ್ನು ತಡೆದ ರಾಜಸ್ಥಾನದ ಮೂವರು ನಾಯಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲು ರಚಿಸಲಾದ ಶಿಸ್ತು ಸಮಿತಿಯ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com