ದೀಪಾವಳಿ ವೇಳೆ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲ್ಲ ಎಂದ ಸರ್ಕಾರ, ಯಾವ ರಾಜ್ಯದಲ್ಲಿ ಈ ನಿಯಮ?

ಈ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಗುಜರಾತ್ ಸರ್ಕಾರ ಘೋಷಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಸೂರತ್: ಈ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಗುಜರಾತ್ ಸರ್ಕಾರ ಘೋಷಿಸಿದೆ.

ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಶುಕ್ರವಾರ ಇಲ್ಲಿ ಈ ಘೋಷಣೆ ಮಾಡಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೀಪಾವಳಿ ಹಬ್ಬದ ದೃಷ್ಟಿಯಿಂದ ಗುಜರಾತ್‌ನ ಸಂಚಾರ ಪೊಲೀಸರು ಅಕ್ಟೋಬರ್ 27 ರವರೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಂದ ಯಾವುದೇ ದಂಡವನ್ನು ಸಂಗ್ರಹಿಸುವುದಿಲ್ಲ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಮಾರ್ಗದರ್ಶನದಂತೆ ರಾಜ್ಯ ಗೃಹ ಇಲಾಖೆಯಿಂದ ದೀಪಾವಳಿ ಸಂದರ್ಭದಲ್ಲಿ ಜನರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

'ಅಕ್ಟೋಬರ್ 21 ರಿಂದ ಅಕ್ಟೋಬರ್ 27 ರವರೆಗೆ ಗುಜರಾತ್‌ನ ಟ್ರಾಫಿಕ್ ಪೊಲೀಸರು ಜನರಿಂದ ಯಾವುದೇ ದಂಡವನ್ನು ಸಂಗ್ರಹಿಸುವುದಿಲ್ಲ. ಈ ಅವಧಿಯಲ್ಲಿ ಯಾರಾದರೂ ಹೆಲ್ಮೆಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಸಿಕ್ಕಿಬಿದ್ದರೆ ಅಥವಾ ಇತರ ಯಾವುದೇ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ, ನಮ್ಮ ಪೊಲೀಸರು ಅವರಿಗೆ ಹೂವು ನೀಡುತ್ತಾರೆ' ಎಂದು ಸಚಿವರು ಹೇಳಿದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ಗುಜರಾತ್‌ನಲ್ಲಿ ಡಿಸೆಂಬರ್ ಅಂತ್ಯದೊಳಗೆ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಶುಕ್ರವಾರ ಆಚರಿಸಿದ ಗೋವತ್ಸ ದ್ವಾದಶಿ ಈ ವರ್ಷದ ದೀಪಾವಳಿ ಹಬ್ಬಕ್ಕೆ ನಾಂದಿ ಹಾಡಿತು.

ದೀಪಗಳ ಹಬ್ಬದ ಪ್ರಮುಖ ದಿನವಾದ ಲಕ್ಷ್ಮೀ ಪೂಜೆಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com