ಭಗತ್ ಸಿಂಗ್ ನಿವಾಸಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿಲ್ಲ; ಪಂಜಾಬ್ ಸರ್ಕಾರ 

ಭಗತ್ ಸಿಂಗ್ ನಿವಾಸಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿಲ್ಲ ಎಂದು ಪಂಜಾಬ್ ಸರ್ಕಾರ ಹೇಳಿದೆ.
ಭಗತ್ ಸಿಂಗ್
ಭಗತ್ ಸಿಂಗ್

ಚಂಡೀಗಢ: ಭಗತ್ ಸಿಂಗ್ ನಿವಾಸಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿಲ್ಲ ಎಂದು ಪಂಜಾಬ್ ಸರ್ಕಾರ ಹೇಳಿದೆ.

ಭಗತ್ ಸಿಂಗ್ ಅವರ ಪೂರ್ವಜರ ಮನೆಯನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು, ಈ ಮನೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗತೊಡಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಥಳೀಯ ಆಡಳಿತ ಯಾವುದೇ ಬಿಲ್ ನ ಹಣವೂ ಬಾಕಿ ಇಲ್ಲ ಎಂದೂ ತಿಳಿಸಿದೆ.

ವಾಸ್ತವದಲ್ಲಿ ವಿದ್ಯುತ್ ಪೂರೈಕೆ ಇಲಾಖೆಯ ಬಳಿ ಭಗತ್ ಸಿಂಗ್ ಅವರ ನಿವಾಸಕ್ಕೆ ಸಂಬಂಧಿಸಿದಂತೆ 6,760 ರೂಪಾಯಿ ಮುಂಗಡ ಹಣ ಇದೆ ಎಂದು ಜಿಲ್ಲಾಧಿಕಾರಿ ನವಜೋತ್ ಪಾಲ್ ಸಿಂಗ್ ರಾಂಧವಾ ಮಾಧ್ಯಮಗಳಿಗೆ ಹೇಳಿದ್ದಾರೆ. ಐತಿಹಾಸಿಕ ಸ್ಥಳವಾಗಿರುವ ಭಗತ್ ಸಿಂಗ್ ಅವರ ಮನೆ ಲಕ್ಷಾಂತರ ಮಂದಿಯ ಭಾವನೆಗಳೊಂದಿಗೆ ತಳುಕು ಹಾಕಿಕೊಂಡಿದ್ದು, ಅವರ ಪೂರ್ವಜರ ಮನೆಯ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ರಾಂಧವಾ ಮನವಿ ಮಾಡಿದ್ದಾರೆ. 

ಇದಕ್ಕೂ ಮುನ್ನ ಇಂಧನ ಸಚಿವ ಹರ್ಭಜನ್ ಸಿಂಗ್ ಸಹ ಸ್ಪಷ್ಟನೆ ನೀಡಿದ್ದು, ಶಹೀದ್ ಭಗತ್ ಸಿಂಗ್ ಅವರ ಪೂರ್ವಜರ ನಿವಾಸಕ್ಕೆ ಎಂದಿಗೂ ವಿದ್ಯುತ್ ಕಡಿತಗೊಳಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಭಗತ್ ಸಿಂಗ್ ಅವರ ನಿವಾಸಕ್ಕೆ ಸಂಸ್ಕೃತಿ ಇಲಾಖೆ ಹೆಸರಿನಲ್ಲಿ ಪ್ರತ್ಯೇಕವಾದ ವಿದ್ಯುತ್ ಸಂಪರ್ಕ ಅಸ್ತಿತ್ವದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com