ನಿಷೇಧದ ಹೊರತಾಗಿಯೂ ದೀಪಾವಳಿ ಹಬ್ಬದ ರಾತ್ರಿ ದೆಹಲಿಯ ಹಲವು ಭಾಗಗಳಲ್ಲಿ ಪಟಾಕಿ ಸಿಡಿಸಿದ ಜನರು

ದೆಹಲಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದರೂ ಕೂಡ ಇದನ್ನು ಲೆಕ್ಕಿಸದ ಜನರು ದೀಪಾವಳಿ ಹಬ್ಬದ ರಾತ್ರಿಯಲ್ಲಿ ಹೆಚ್ಚಿನ ಸಂಖ್ಯೆಯ ಹೆಚ್ಚಿನ ಡೆಸಿಬಲ್ ಪಟಾಕಿಗಳನ್ನು ಸಿಡಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ದೆಹಲಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದರೂ ಕೂಡ ಇದನ್ನು ಲೆಕ್ಕಿಸದ ಜನರು ದೀಪಾವಳಿ ಹಬ್ಬದ ರಾತ್ರಿಯಲ್ಲಿ ಹೆಚ್ಚಿನ ಸಂಖ್ಯೆಯ ಹೆಚ್ಚಿನ ಡೆಸಿಬಲ್ ಪಟಾಕಿಗಳನ್ನು ಸಿಡಿಸಿದ್ದಾರೆ.

ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 200 ರೂಪಾಯಿ ದಂಡ ವಿಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಕಳೆದ ವಾರ ಹೇಳಿದ್ದರು.

ಪಟಾಕಿ ನಿಷೇಧದ ಕಾನೂನು ಜಾರಿಯಲ್ಲಿದ್ದರೂ, ದಕ್ಷಿಣ ಮತ್ತು ವಾಯುವ್ಯ ದೆಹಲಿ ಸೇರಿದಂತೆ ನಗರದ ಹಲವೆಡೆ ಜನರು ಸೋಮವಾರ ಸಂಜೆಯ ವೇಳೆಗೆ ಪಟಾಕಿಗಳನ್ನು ಸಿಡಿಸಲಾರಂಭಿಸಿದರು. ನೆಲದ ಮೇಲೆ ಅಥವಾ ಮೇಲಕ್ಕೆ ಚಿಮ್ಮುವಂತ ಹೆಚ್ಚಿನ ತೀವ್ರತೆಯ ಪಟಾಕಿಗಳನ್ನು ಸಿಡಿಸಲಾಯಿತು.

ದೀಪಾವಳಿಯ ನಂತರದ ಬೆಳಿಗ್ಗೆ ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ವಿಭಾಗದಲ್ಲಿ ದಾಖಲಾಗಿದೆ. ಆದರೆ, ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ ಹಿಂದಿನ ವರ್ಷಗಳಿಗಿಂತ ಪರಿಸ್ಥಿತಿಯು ಉತ್ತಮವಾಗಿದೆ ಮತ್ತು ಇದು ಮಾಲಿನ್ಯಕಾರಕಗಳ ತ್ವರಿತ ಶೇಖರಣೆಯನ್ನು ತಡೆಯುತ್ತದೆ.
ಮಂಗಳವಾರ ಬೆಳಗ್ಗೆ 7 ಗಂಟೆಗೆ ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 326ರಷ್ಟಿತ್ತು.

ನೆರೆಯ ನಗರಗಳಾದ ಗಾಜಿಯಾಬಾದ್ (285), ನೋಯ್ಡಾ (320), ಗ್ರೇಟರ್ ನೋಯ್ಡಾ (294), ಗುರುಗ್ರಾಮ (315) ಮತ್ತು ಫರಿದಾಬಾದ್ (310) 'ಕಳಪೆ'ಯಿಂದ 'ಅತ್ಯಂತ ಕಳಪೆ' ಗಾಳಿಯ ಗುಣಮಟ್ಟವನ್ನು ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com