ಬಿಹಾರದಲ್ಲಿ ಮರ್ಯಾದಾ ಹತ್ಯೆ: ಮಹಿಳಾ ಸರಪಂಚ್ ರಿಂದ ಮಗಳು, ಚಾಲಕನ ಬರ್ಬರ ಹತ್ಯೆ!

ಬಿಹಾರದಲ್ಲಿ ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ ಜೋಡಿಯ ಶವ ಬೇಗುಸರೈ ರೈಲು ನಿಲ್ದಾಣದ ಹಳಿಯಲ್ಲಿ ಪತ್ತೆಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಟ್ನಾ: ಬಿಹಾರದಲ್ಲಿ ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣದಲ್ಲಿ ಜೋಡಿಯ ಶವ ಬೇಗುಸರೈ ರೈಲು ನಿಲ್ದಾಣದ ಹಳಿಯಲ್ಲಿ ಪತ್ತೆಯಾಗಿವೆ.

ಮೃತರನ್ನು ಲಖನೌ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಪುರ ಡುಮ್ರಿ ಮೂಲದ 25 ವರ್ಷದ ರಾಮನುನು ಪಾಸ್ವಾನ್ ಮತ್ತು ಅಯೋಧ್ಯಾ ಬ್ಯಾರಿ ಗ್ರಾಮದ ಸರಪಂಚರ ಪುತ್ರಿ ರೂಪಮ್ ಕುಮಾರಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆಯ ತಾಯಿ ಸರಪಂಚ್ ಆಗಿರುವ ಅನಿತಾ ದೇವಿ ಜೋಡಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದು ಈ ಅವಳಿ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗಳು ಮತ್ತು ನಮ್ಮ ಡ್ರೈವರ್ ಇಬ್ಬರೂ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ನಂತರ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದೆ. ನಂತರ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ರಾಮನುನು ಕಳೆದ ಹಲವು ವರ್ಷಗಳಿಂದ ಸರಪಂಚರ ಮನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಸರಪಂಚ್ ಅನಿತಾ ದೇವಿ ಮಗಳನ್ನು ಪ್ರೀತಿಸುತ್ತಿದ್ದನು. ಕೆಲಸದಿಂದ ವಜಾಗೊಂಡ ನಂತರವೂ ಅವಳನ್ನು ಭೇಟಿಯಾಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಾಕ್ಟರ್ ಟ್ರಾಲಿಯಿಂದ ಮರಳು ಇಳಿಸುವ ನೆಪದಲ್ಲಿ ಚಾಲಕನನ್ನು ಮನೆಗೆ ಕರೆಸಿಕೊಂಡು ಸರಪಂಚ್ ಮತ್ತು ಆಕೆಯ ಸಹಚರರು ಆತನನ್ನು ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ. ಇನ್ನು ಅವಳಿ ಹತ್ಯೆಗೆ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಯುವತಿಯ ಪೋಷಕರು ಲಖನೌ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಅವಳಿ ಹತ್ಯೆಯ ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com