ದೀಪಾವಳಿ ದಿನದಂದು ದೆಹಲಿಯ ವಾಯುಗುಣಮಟ್ಟ ತೀವ್ರ ಕುಸಿತ, ಬೆಂಗಳೂರಿನ ಕಥೆ ಏನು...?

ದೀಪಾವಳಿ ದಿನದಂದು ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುರುಗ್ರಾಮದಲ್ಲಿನ ವಾಯುಗುಣಮಟ್ಟ ಸೂಚ್ಯಂಕ ಅಥವಾ ಎಕ್ಯುಐ 300 ರ ಮೇಲ್ಪಟ್ಟಿದ್ದು ತೀವ್ರವಾಗಿ ಹದಗೆಟ್ಟಿದೆ.
ದೆಹಲಿಯ ವಾಯುಗುಣಮಟ್ಟ
ದೆಹಲಿಯ ವಾಯುಗುಣಮಟ್ಟ

ನವದೆಹಲಿ: ದೀಪಾವಳಿ ದಿನದಂದು ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಗುರುಗ್ರಾಮದಲ್ಲಿನ ವಾಯುಗುಣಮಟ್ಟ ಸೂಚ್ಯಂಕ ಅಥವಾ ಎಕ್ಯುಐ 300 ರ ಮೇಲ್ಪಟ್ಟಿದ್ದು ತೀವ್ರವಾಗಿ ಹದಗೆಟ್ಟಿದೆ.

ಅ.24 ರ ಸಂಜೆ 4 ಗಂಟೆ ವೇಳೆಗೆ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ದಾಖಲೆಗಳ ಪ್ರಕಾರ, ನೋಯ್ಡಾದಲ್ಲಿ ಎಕ್ಯುಐ ಮಟ್ಟ 305 ರಷ್ಟು ದಾಖಲಾಗಿದೆ. 322 ಅಂಕಗಳೊಂದಿಗೆ ಗುರುಗ್ರಾಮ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದರೆ, ದೆಹಲಿ 312 ರೊಂದಿಗೆ 2 ನೇ ಸ್ಥಾನದಲ್ಲಿದೆ.

ಮುಂಬೈ ನಲ್ಲಿನ ಎಕ್ಯುಐ 136, ಬೆಂಗಳೂರಿನಲ್ಲಿ 100, 54 ಎಕ್ಯುಐ ಗಳೊಂದಿಗೆ ಕೋಲ್ಕತ್ತ ದೇಶದಲ್ಲೇ ಅತಿ ಹೆಚ್ಚು ಶುದ್ಧಗಾಳಿಯನ್ನು ಹೊಂದಿರುವ ನಗರವಾಗಿದೆ.

0-50 ವರೆಗಿನ ಎಕ್ಯುಐನ್ನು ಅತ್ಯಂತ ಶುದ್ಧ ಗಾಳಿ ಎಂದು ಹೇಳಲಾಗುತ್ತದೆ. 51-100 ನ್ನು ಸಾಧಾರಣ, 101 ರಿಂದ 200 ನ್ನು ಮಧ್ಯಮ, 201 ಹಾಗೂ 300 ನ್ನು ಕಳಪೆ, 301-400 ಎಕ್ಯುಐ ನ್ನು ಅತ್ಯಂತ ಕಳಪೆ, 401 ರಿಂದ 500 ನ್ನು ತೀವ್ರ ಹದಗೆಟ್ಟ ವಾಯುಗುಣಮಟ್ಟ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com