ಉಷ್ಣ ಹವೆಯಿಂದ ಸಾವು ಪ್ರಕರಣಗಳು ಶೇ.55 ರಷ್ಟು ಏರಿಕೆ: ಲ್ಯಾನ್ಸೆಟ್ ವರದಿ

ಭಾರತದಲ್ಲಿ ಉಷ್ಣ ಹವೆಯ ಕಾರಣ ಸಂಭವಿಸಿರುವ ಸಾವಿನ ಪ್ರಕರಣಗಳು ಶೇ.55 ರಷ್ಟು ಏರಿಕೆಯಾಗಿದೆ ಎಂದು ಲ್ಯಾನ್ಸೆಟ್ ನ ಇತ್ತೀಚಿನ ವರದಿ ಮೂಲಕ ತಿಳಿದುಬಂದಿದೆ.
ಉಷ್ಣ ಹವೆ (ಸಂಗ್ರಹ ಚಿತ್ರ)
ಉಷ್ಣ ಹವೆ (ಸಂಗ್ರಹ ಚಿತ್ರ)

ನವದೆಹಲಿ: ಭಾರತದಲ್ಲಿ ಉಷ್ಣ ಹವೆಯ ಕಾರಣ ಸಂಭವಿಸಿರುವ ಸಾವಿನ ಪ್ರಕರಣಗಳು ಶೇ.55 ರಷ್ಟು ಏರಿಕೆಯಾಗಿದೆ ಎಂದು ಲ್ಯಾನ್ಸೆಟ್ ನ ಇತ್ತೀಚಿನ ವರದಿ ಮೂಲಕ ತಿಳಿದುಬಂದಿದೆ.
 
2000-2004 ಹಾಗೂ 2017-2019 ಕ್ಕೆ ಹೋಲಿಕೆ ಮಾಡಿದಾಗ ಈ ಏರಿಕೆ ಕಂಡುಬಂದಿದ್ದು, 2020 ರಲ್ಲಿ 3,30,000 ಮಂದಿ ಭಾರತದಲ್ಲಿ ಪಳೆಯುಳಿಕೆ ಇಂಧನ ದಹನದ ಕಣಗಳ ವಸ್ತುಗಳಿಗೆ ಒಡ್ಡಿಕೊಳ್ಳುವುದರ ಪರಿಣಾಮದಿಂದ ಸಾವನ್ನಪ್ಪಿದ್ದರು. 

2022 ರಲ್ಲಿ ಕೌಂಟ್ ಡೌನ್ ಆನ್ ಹೆಲ್ತ್& ಕ್ಲೈಮೆಟ್ ಚೇಂಜ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ವರದಿಯಲ್ಲಿ "ಗಣನೀಯವಾಗಿ ಏರಿಕೆಯಾಗುತ್ತಿರುವ ತಾಪಮಾನಗಳಿಂದ 65 ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಕರು ಹಾಗೂ ಒಂದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು 1986-2005 ವರೆಗಿನ ಅವಧಿಗೆ ಹೋಲಿಸಿದರೆ 2021 ರಲ್ಲಿ 3.7 ಬಿಲಿಯನ್ ಹೆಚ್ಚುವರಿ ಉಷ್ಣಹವೆಯ ದಿನಗಳನ್ನು ಕಳೆದಿದ್ದಾರೆ ಎಂಬ ಲೆಕ್ಕಾಚಾರವನ್ನು ವರದಿಯಲ್ಲಿ ಮಂಡಿಸಲಾಗಿದೆ. 

ಬದಲಾವಣೆಯಾಗುತ್ತಿರುವ ಹವಾಮಾನದಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಳವಾಗುತ್ತಿದ್ದು, ಜನಸಾಮಾನ್ಯರಿಗೆ ರೋಗಗಳು ಮತ್ತು ಸಹ-ಸಾಂಕ್ರಾಮಿಕ ರೋಗಗಳ ಅಪಾಯವೊಡ್ಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ತೀವ್ರವಾದ ತಾಪಮಾನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದ್ದು, ಹೃದಯರಕ್ತನಾಳದ ಮತ್ತು ಉಸಿರಾಟದ ಕಾಯಿಲೆಗಳನ್ನು ಹೆಚ್ಚುಗೊಳಿಸಲಿದೆ ಇದರಿಂದ ಮಾನಸಿಕ ಆರೋಗ್ಯವೂ ಹೆಚ್ಚಳವಾಗುತ್ತಿದ್ದು ಸಾವಿನ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಲ್ಯಾನ್ಸೆಟ್ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com