ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನ ಷರತ್ತುಗಳನ್ನು ಮರುಸ್ಥಾಪಿಸಿ: ಮೆಹ್ಬೂಬಾ ಮುಫ್ತಿ 

ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನವಾಗಲು  ಮಹಾರಾಜ ಹರಿ ಸಿಂಗ್ ಸಹಿ ಹಾಕುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಮರು ಸ್ಥಾಪಿಸದೇ ಇದ್ದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಾರತದ ಇರುವಿಕೆ ಅಕ್ರಮವಾಗಲಿದೆ ಎಂದು ಪಿಡಿಪಿ ಅಧ್ಯಕ್ಷ್ಯೆ ಮೆಹ್ಬೂಬಾ ಮುಫ್ತಿ ಹೇಳಿದ್ದಾರೆ.
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ

ಶ್ರೀನಗರ: ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನವಾಗಲು  ಮಹಾರಾಜ ಹರಿ ಸಿಂಗ್ ಸಹಿ ಹಾಕುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಮರು ಸ್ಥಾಪಿಸದೇ ಇದ್ದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಾರತದ ಇರುವಿಕೆ ಅಕ್ರಮವಾಗಲಿದೆ ಎಂದು ಪಿಡಿಪಿ ಅಧ್ಯಕ್ಷ್ಯೆ ಮೆಹ್ಬೂಬಾ ಮುಫ್ತಿ ಹೇಳಿದ್ದಾರೆ.
 
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ 2019 ರ ಆಗಸ್ಟ್ 5 ರ ನಿರ್ಧಾರ ಕಾನೂನು ಬಾಹಿರ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 

ಜಮ್ಮು-ಕಾಶ್ಮೀರ ಭಾರತದ ಭಾಗವಾಗಲು ಒಪ್ಪಿಗೆ ನೀಡಿದಾಗ ವಿಧಿಸಲಾಗಿದ್ದ ಷರತ್ತುಗಳನ್ನು ಮರುಸ್ಥಾಪಿಸಬೇಕು ಅಥವಾ ಜಮ್ಮು-ಕಾಶ್ಮೀರದಲ್ಲಿ ಭಾರತದ ಇರುವಿಕೆ ಅಕ್ರಮವಾಗಲಿದೆ. 1947 ರಲ್ಲಿ ಸೇರ್ಪಡೆಯ ಸಂದರ್ಭದ ಖಾತ್ರಿಗಳನ್ನು ನಮ್ಮಿಂದ ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದನ್ನು ಯಾರಾದರೂ ಅನ್ಯಾಯವಾಗಿ ಕಸಿದುಕೊಂಡಿದ್ದೇ ಆದಲ್ಲಿ ಬಿಜೆಪಿ ಮತ್ತೊಮ್ಮೆ ಹೊಸದಾಗಿ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಸೇರ್ಪಡೆಗೊಳಿಸಿಕೊಳ್ಳಬೇಕಾಗುತ್ತದೆ. ಆಗ ಷರತ್ತುಗಳು ಇರಲಿವೆ ನನಗೆ ಗೊತ್ತಿಲ್ಲ ಎಂದು ಮೆಹಬೂಬಾ ಮುಫ್ತಿ ಪಕ್ಷದ ಕಚೇರಿಯಲ್ಲಿ ಹೇಳಿದ್ದಾರೆ. 

ಒಂದು ಮುಸ್ಲಿಮ್ ಬಹುಸಂಖ್ಯಾತ ರಾಜ್ಯವಿದ್ದು, ಅದನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ? ಎಂದು ಮುಫ್ತಿ ಪ್ರಶ್ನಿಸಿದ್ದು, ಬಿಜೆಪಿ ವಿರುದ್ಧ ಜಮ್ಮು-ಕಾಶ್ಮೀರವನ್ನು ಹಾಳು ಮಾಡುತ್ತಿರುವ ಆರೋಪ ಮಾಡಿದ್ದಾರೆ. 

ಭಾರತದೊಂದಿಗೆ ನಮ್ಮ ಸಂಬಂಧ ಸೇರ್ಪಡೆಯ ಸಾಧನದ ಆಧಾರದಲ್ಲಿತ್ತು ಆದರೆ ಅದನ್ನು ಈಗ ನೀವು ಗನ್, ಸೇನೆ, ಪಿಎಸ್ಎ, ಯುಎಪಿಎ, ಇಡಿ ಆಧಾರದಲ್ಲಿರಿಸಿಕೊಂಡಿದ್ದೀರ, ಇದನ್ನೇ ಎಷ್ಟು ಮುಂದುವರೆಸಲು ಸಾಧ್ಯ ಎಂದು ಮುಫ್ತಿ ಪ್ರಶ್ನಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com