ಚೆನ್ನೈ: ಗೃಹ ಪ್ರವೇಶಕ್ಕೆ ಪ್ರಾಣಿ ಬಲಿ ವೇಳೆ ದುರಂತ; ಕೋಳಿ ಬಚಾವ್, ವ್ಯಕ್ತಿ ಸಾವು!
ಇದನ್ನು ವಿಧಿಯ ಆಟವೆನ್ನಬೇಕೋ ಗೊತ್ತಿಲ್ಲ. ಹೊಸದಾಗಿ ಕಟ್ಟಿಸಿದ ಮನೆಯನ್ನು ದುಷ್ಟಶಕ್ತಿಗಳಿಂದ ದೂರವಿಡಲು ಬಯಸಿದ 70 ವರ್ಷದ ವೃದ್ಧರೊಬ್ಬರು ಗಂಡು ಕೋಳಿ(ಹುಂಜ)ಯನ್ನು ಬಲಿ ಕೊಡಲು ನಿರ್ಧರಿಸಿ ಮನೆಯ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಅಚ್ಚರಿಯೆಂಬಂತೆ ಅವರ ಮೇಲೆ ಬಿದ್ದ ಹುಂಜ ಮಾತ್ರ ಸ್ವಲ್ಪವೂ ಗಾಯವಿಲ್ಲದೆ ಬದುಕುಳಿದಿದೆ.
Published: 28th October 2022 01:01 PM | Last Updated: 28th October 2022 01:50 PM | A+A A-

ಸಾಂಕೇತಿಕ ಚಿತ್ರ
ಚೆನ್ನೈ: ಇದನ್ನು ವಿಧಿಯ ಆಟವೆನ್ನಬೇಕೋ ಗೊತ್ತಿಲ್ಲ. ಹೊಸದಾಗಿ ಕಟ್ಟಿಸಿದ ಮನೆಯನ್ನು ದುಷ್ಟಶಕ್ತಿಗಳಿಂದ ದೂರವಿಡಲು ಹೊರಟ 70 ವರ್ಷದ ವೃದ್ಧರೊಬ್ಬರು ಗಂಡು ಕೋಳಿ(ಹುಂಜ)ಯನ್ನು ಬಲಿ ಕೊಡಲು ನಿರ್ಧರಿಸಿ ಮನೆಯ ಮೂರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಅಚ್ಚರಿಯೆಂಬಂತೆ ಅವರ ಮೇಲೆ ಬಿದ್ದ ಹುಂಜ ಮಾತ್ರ ಸ್ವಲ್ಪವೂ ಗಾಯವಿಲ್ಲದೆ ಬದುಕುಳಿದಿದೆ.
ರಾಜೇಂದ್ರನ್ ಎಂಬ ದಿನಗೂಲಿ ಕಾರ್ಮಿಕ ಪೂಜಾರಿಯಾಗಿ ಚೆನ್ನೈಯ ಪಲ್ಲವರಂ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೂರನೇ ಮಹಡಿಯನ್ನು ಪ್ರವೇಶಿಸಿದರು. ಅಲ್ಲಿ ತೆರೆದ ಲಿಫ್ಟ್ ಶಾಫ್ಟ್‌ಗೆ ಕಾಲಿಟ್ಟು ಬಿದ್ದಾಗ ಅವರ ಜೊತೆ ಹುಂಜವು ಅವರ ಮೇಲೆ ಬಿದ್ದಿದೆ.
ರಾಜೇಂದ್ರನ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಾ ನಿರ್ಮಾಣ ಕಾರ್ಯವನ್ನು ನೋಡಿಕೊಳ್ಳುತ್ತಿದ್ದರು. ಗೃಹಪ್ರವೇಶ ಸಮಾರಂಭಕ್ಕೂ ಮುನ್ನ ಅವರು ವಿಧಿ ವಿಧಾನಗಳನ್ನು ನಡೆಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಲ್ಲಾವರಂನ ಪೊಜಿಚಲೂರಿನ ಟಿ ಲೋಕೇಶ್ ಇಂದು ತಮ್ಮ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಗೃಹಪ್ರವೇಶ ಸಮಾರಂಭವನ್ನು ಯೋಜಿಸಿದ್ದರು.
ಸುಮಾರು ಶೇಕಡಾ 80ರಷ್ಟು ಕೆಲಸ ಮುಗಿದರೆ ಗೃಹ ಪ್ರವೇಶ ಮುಗಿಸಿ ನಂತರ ಕೆಲಸ ಪೂರ್ಣಗೊಳಿಸಿ ಮನೆಗೆ ಪ್ರವೇಶಿಸುವುದು ಸಾಮಾನ್ಯ. ಅದೇ ರೀತಿ ಲೋಕೇಶ್ ಅಂದುಕೊಂಡಿದ್ದರು.
ಹಲವಾರು ವರ್ಷಗಳಿಂದ ಕುಟುಂಬ ಸಂಪರ್ಕವಿಲ್ಲ
ಲೋಕೇಶ್ ಅವರು ಲಿಫ್ಟ್ ನಿರ್ಮಿಸಲು ಮೀಸಲಿದ್ದ ಜಾಗವನ್ನು ಇನ್ನೂ ತೆರೆದಿಟ್ಟಿದ್ದರು. ಗೃಹ ಪ್ರವೇಶಕ್ಕೆ ಮೊದಲು ಹುಂಜ ಬಲಿ ಕೊಡುವಂತೆ ಲೋಕೇಶ್ ಕೇಳಿದ ಮೇರೆಗೆ ನಿನ್ನೆ ಗುರುವಾರ ಮುಂಜಾನೆ 4.30ರ ಸುಮಾರಿಗೆ ರಾಜೇಂದ್ರನ್ ಮನೆಗೆ ಬಂದರು. ನಂತರ ಒಬ್ಬರೇ ಮೇಲಿನ ಮಹಡಿಗೆ ಹೋಗಿದ್ದರು. ಕೆಲವು ನಿಮಿಷಗಳ ನಂತರ, ರಾಜೇಂದ್ರನ್ ತೆರೆದ ಲಿಫ್ಟ್ ಶಾಫ್ಟ್‌ಗೆ ಕಾಲಿಟ್ಟು ನೆಲಕ್ಕೆ ಅಪ್ಪಳಿಸಿದ್ದಾರೆ. ಹಾರಲು ಹೆಣಗಾಡುತ್ತಿದ್ದ ಹುಂಜ ಅವರ ಮೇಲೆ ಬಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಾಯಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ, ರಾಜೇಂದ್ರನ್ ತೆರೆದ ಸ್ಥಳದಲ್ಲಿ ಕೋಳಿಯ ಕುತ್ತಿಗೆಯನ್ನು ಸೀಳಲು ಯೋಚಿಸಿರಬಹುದು. ಮನೆಯಲ್ಲಿ ಸಿಮೆಂಟ್ ಮತ್ತು ತಂತಿ ತುಂಬಿದ್ದರಿಂದ ಕಾಲು ಜಾರಿ ಬಿದ್ದಿರಬಹುದು. ಕಳೆದ ಹಲವು ವರ್ಷಗಳಿಂದ ರಾಜೇಂದ್ರನ್ ಅವರ ಕುಟುಂಬದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ ಎಂದು ಪೊಲೀಸರು ಹೇಳುತ್ತಾರೆ.