ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ಟಿಆರ್ ಎಸ್ ಶಾಸಕರ ಖರೀದಿ ಪ್ರಕರಣ: ಅಮಿತ್ ಶಾ ಬಂಧಿಸುವಂತೆ ಮನೀಶ್ ಸಿಸೋಡಿಯಾ ಆಗ್ರಹ

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌)ಯ ಕೆಲವು ಶಾಸಕರಿಗೆ ಲಂಚ ನೀಡಿ ಅವರನ್ನು ಬಿಜೆಪಿಗೆ ಕರೆತರಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್‌...

ನವದೆಹಲಿ: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌)ಯ ಕೆಲವು ಶಾಸಕರಿಗೆ ಲಂಚ ನೀಡಿ ಅವರನ್ನು ಬಿಜೆಪಿಗೆ ಕರೆತರಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. 

ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸಲು 'ಆಪರೇಷನ್ ಕಮಲ' ಎಂದು ಕರೆಯಲಾಗುವ ಕಾರ್ಯದಲ್ಲಿ ಅಮಿತ್ ಶಾ ಭಾಗಿಯಾಗಿದ್ದಾರೆ ಎಂದು ಆಪ್ ನಾಯಕ ಆರೋಪಿಸಿದ್ದಾರೆ.

ಈ ಹಿಂದೆ ದೆಹಲಿ, ಪಂಜಾಬ್ ಮತ್ತು ಇತರ ಎಂಟು ರಾಜ್ಯಗಳಲ್ಲಿ ಶಾಸಕರ ಖರೀದಿಗೆ ಬಿಜೆಪಿ   ಪ್ರಯತ್ನ ಮಾಡಿತ್ತು. ಈ ಬಾರಿ ತೆಲಂಗಾಣದಲ್ಲಿ ಬಿಜೆಪಿಯ ಡರ್ಟಿ ಗೇಮ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ನಾಯಕ ಹೇಳಿದ್ದಾರೆ.

ಬಿಜೆಪಿಗೆ ಸೇರಲು ಕೆಲವು ಟಿಆರ್‌ಎಸ್ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿರುವ ಮೂವರು ವ್ಯಕ್ತಿಗಳ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಅನ್ನು ಉಲ್ಲೇಖಿಸಿದ ಸಿಸೋಡಿಯಾ, ಅದರಲ್ಲಿ ಒಬ್ಬ ವ್ಯಕ್ತಿ "ಶಾಹ್ ಜಿ" ಎಂದು ಹೇಳಲಾಗಿದೆ ಎಂದು ಶ್ರೀ ಸಿಸೋಡಿಯಾ ಹೇಳಿದ್ದಾರೆ.

"ಶಾಹ್ ಜಿ' ಹೆಸರು ನಿಜವಾಗಿಯೂ ಪ್ರಸ್ತಾಪ ಆಗಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಯಾಕೆಂದರೆ ಒಬ್ಬ ದಲ್ಲಾಳಿ, ಶಾಸಕರೊಬ್ಬರನ್ನು ಖರೀದಿಸಲು ಹೋಗಿ ಸಿಕ್ಕಿಬಿದ್ದರೆ ಮತ್ತು ದೇಶದ ಗೃಹ ಸಚಿವರ ಹೆಸರು ಅದರಲ್ಲಿ ಕೇಳಿ ಬಂದರೆ ಅದು ಇಡೀ ದೇಶಕ್ಕೆ ತುಂಬಾ ಅಪಾಯಕಾರಿ ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com