ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರಕ್ಕೆ ಬೇಡಿಕೆ: ಕೇಜ್ರಿವಾಲ್ ವಿರುದ್ಧ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ
ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Published: 29th October 2022 11:41 AM | Last Updated: 29th October 2022 11:42 AM | A+A A-

ಅನುರಾಗ್ ಠಾಕೂರ್
ನವದೆಹಲಿ: ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ ಅರಾಜಕತೆಯ ಸಂಕೇತವಾಗಿದ್ದಾರೆ. ಹೊಸ ಪ್ರಚಾರ ತಂತ್ರದ ಮೂಲಕ ಅವರ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯದಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಕರೆನ್ಸಿ ಮೇಲೆ ಲಕ್ಷ್ಮಿ, ಗಣೇಶ ಚಿತ್ರ ಮುದ್ರಿಸಿ: ಮೋದಿಗೆ ಕೇಜ್ರಿವಾಲ್ ಪತ್ರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿರುವ ಮುಸ್ಲಿಂ ಧರ್ಮಗಳಿಗೆ 18,000 ರೂ. ನೀಡುವ ಅರವಿಂದ್ ಕೇಜ್ರಿವಾಲ್ ಅಷ್ಟೇ ಹಣವನ್ನು ಆರ್ಚಕರು, ಗುರುದ್ವಾರದ ಗ್ರಂಥಿಗಳು, ಪಾದ್ರಿಗಳಿಗೂ ನೀಡಲಿ, ಏಕೆ ನೀಡುತ್ತಿಲ್ಲ ಎಂದು ಅವರು ತೀವ್ರ ಟೀಕಾ ಪ್ರಹಾರ ನಡೆಸಿದರು.
You (Delhi CM) give Rs 18,000 per annum to Muslim clerics in Delhi. Will you also give the same Rs 18,000 to priests, gurdwara granthis & pastors? Why couldn't you do it?: Union Min Anurag Thakur on Delhi CM's appeal for Goddess Laxmi-Lord Ganesh pics on Indian currency notes pic.twitter.com/rIaMwphQCQ
— ANI (@ANI) October 29, 2022