
ಫಡ್ನವಿಸ್-ಏಕನಾಥ್ ಶಿಂಧೆ
ಮುಂಬೈ: ಮಹಾರಾಷ್ಟ್ರ ಸರ್ಕಾರ ಮಹಾ ವಿಕಾಸ್ ಅಘಾಡಿ ಮೈತ್ರಿಯ 25 ನಾಯಕರ ಶ್ರೇಣೀಕೃತ ಭದ್ರತೆಯನ್ನು ವಾಪಸ್ ಪಡೆದಿದೆ.
ಭದ್ರತೆಯನ್ನು ಹಿಂಪಡೆದಿರುವ ಪರಿಣಾಮ ಈ ನಾಯಕರ ಮನೆಯ ಬಳಿ ಶಾಶ್ವತ ಬೆಂಗಾವಲು ಪಡೆ ಅಥವಾ ಪೊಲೀಸ್ ಭದ್ರತೆ ಇರುವುದಿಲ್ಲ. ಈ ನಾಯಕರ ಭದ್ರತಾ ಗ್ರಹಿಕೆಯ ಹೊಸ ಮೌಲ್ಯಮಾಪನದ ಆಧಾರದಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆಯನ್ನು ಕಳೆದುಕೊಂಡವರ ಪೈಕಿ ಹಲವರು ಮಾಜಿ ಸಚಿವರಾಗಿದ್ದು, ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಗೂ ಅವರ ಕುಟುಂಬದ ಭದ್ರತೆಯನ್ನು ಮುಂದುವರೆಸಲಾಗಿದೆ.
ಇದನ್ನೂ ಓದಿ: ಉದ್ಧವ್ ಬಣದ ಇನ್ನೂ ನಾಲ್ವರು ಶಾಸಕರು ಪಕ್ಷ ಬದಲಾಯಿಸಲಿದ್ದಾರೆ: ಕೇಂದ್ರ ಸಚಿವ ರಾಣೆ
ಎನ್ ಸಿಪಿ ನಾಯಕ ಶರದ್ ಪವಾರ್, ಅವರ ಕುಟುಂಬದ ಭದ್ರತೆಯನ್ನು ಮುಂದುವರೆಸಲಾಗಿದ್ದರೆ, ಅದೇ ಪಕ್ಷದ ಜಯಂತ್ ಪಾಟೀಲ್, ಛಗನ್ ಬುಜ್ಬಲ್ ಹಾಗೂ ಅನಿಲ್ ದೇಶ್ ಮುಖ್ ಅವರ ಭದ್ರತೆಯನ್ನು ಹಿಂಪಡೆಯಲಾಗಿದೆ. ಪಾಟೀಲ್ ಹಾಗೂ ಭುಜ್ಬಲ್ ಹಾಗೂ ದೇಶ್ ಮುಖ್ ಅವರು ಈ ಹಿಂದೆ ಗೃಹ ಸಚಿವರಾಗಿದ್ದರು.