ಛತ್​ ಪೂಜೆ ಆಚರಣೆ "ಏಕ್ ಭಾರತ್, ಶ್ರೇಷ್ಠ ಭಾರತ್"ನ ಉದಾಹರಣೆಯಾಗಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ದೇಶಾದ್ಯಂತ ಭಾನುವಾರ ಛತ್​ ಪೂಜೆ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಿ ಮೋದಿ ಅವರು, ಛತ್​ ಪೂಜೆ ಆಚರಣೆ "ಏಕ್ ಭಾರತ್, ಶ್ರೇಷ್ಠ ಭಾರತ್"ನ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ ಭಾನುವಾರ ಛತ್​ ಪೂಜೆ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಿ ಮೋದಿ ಅವರು, ಛತ್​ ಪೂಜೆ ಆಚರಣೆ "ಏಕ್ ಭಾರತ್, ಶ್ರೇಷ್ಠ ಭಾರತ್"ನ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. 

ಮನ್ ಕಿ ಬಾತ್‌ನ 94ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಮೋದಿಯವರು, ಇಂದು ದೇಶದ ಹಲವೆಡೆ ಸೂರ್ಯಾರಾಧನೆಯ ಮಹಾ ಹಬ್ಬವಾದ ಛತ್ ಅನ್ನು ಆಚರಿಸಲಾಗುತ್ತಿದೆ. ಈ ಹಬ್ಬದ ಭಾಗವಾಗಲು ಲಕ್ಷಾಂತರ ಜನರು ತಂತಮ್ಮ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಛತ್ ಪೂಜೆಯ ಸೂರ್ಯಾರಾಧನೆಯು ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿಯ ಆಳವಾದ ಸಂಪರ್ಕಕ್ಕೆ ಸಾಕ್ಷಿಯಾಗಿದೆ. ಇಂದು ವಿದೇಶಗಳಲ್ಲಿಯೂ ಛತ್​ ಪೂಜೆಯ ಚಿತ್ರಗಳನ್ನು ನೋಡುತ್ತಿದ್ದೇವೆ ಎಂದರೆ, ಭಾರತೀಯ ಸಂಸ್ಕೃತಿ ಮತ್ತು ಅದರ ನಂಬಿಕೆಯು ಪ್ರಪಂಚದ ಮೂಲೆ ಮೂಲೆಗಳಲ್ಲಿ ಛಾಪು ಮೂಡಿಸುತ್ತಿದೆ ಎಂದರ್ಥ ಎಂದು ಹೇಳಿದರು.

"ಈ ಹಿಂದೆ ಗುಜರಾತಿನಲ್ಲಿ ಛತ್ ಪೂಜೆಯನ್ನು ಈ ಮಟ್ಟಕ್ಕೆ ನಡೆಸಲಾಗಿರಲಿಲ್ಲ ಎಂಬುದು ನನಗೆ ನೆನಪಿದೆ. ಆದರೆ ಕಾಲಾನಂತರದಲ್ಲಿ, ಇಡೀ ಗುಜರಾತ್‌ನಲ್ಲಿ ಛತ್ ಪೂಜೆಯನ್ನು ಆಚರಿಸಲಾಗುತ್ತಿದೆ. ಇದನ್ನು ನೋಡಿ ನನಗೂ ತುಂಬಾ ಸಂತೋಷವಾಗುತ್ತಿದೆ. ನಾವು ಈಗಷ್ಟೇ ಪವಿತ್ರವಾದ ಛತ್ ಪೂಜೆ, ಸೂರ್ಯನ ಆರಾಧನೆಯ ಬಗ್ಗೆ ಮಾತನಾಡಿದ್ದೇವೆ. ಇಂದು ಸೂರ್ಯನನ್ನು ಆರಾಧಿಸುವುದರ ಜೊತೆಗೆ, ಅವನು ನಮಗೆ ನೀಡಿರುವ ಅದ್ಭುತವಾದ ವರದ ಬಗ್ಗೆ ನಾವೇಕೆ ಚರ್ಚಿಸಬಾರದು? ಆ ವರವೇ ‘ಸೌರಶಕ್ತಿ’ ಆಗಿದೆ. ಸೌರಶಕ್ತಿಯಲ್ಲಿ ಭಾರತವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಸೌರ ಶಕ್ತಿಯನ್ನು ಭಾರತ ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದು, ಸೌರ ಶಕ್ತಿಯು ಬಡ ಮತ್ತು ಮಧ್ಯಮ ವರ್ಗಗಳ ಜೀವನವನ್ನು ಪರಿವರ್ತಿಸುತ್ತಿದೆ ಎಂದು ತಿಳಿಸಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡುತ್ತಿದೆ
ಸೌರ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತಗಳನ್ನು ಭಾರತ ಅದ್ಭುತಗಳನ್ನು ಮಾಡುತ್ತಿದೆ. ದೀಪಾವಳಿಯ ಒಂದು ದಿನದ ಮೊದಲು ಏಕಕಾಲದಲ್ಲಿ 36 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಸೇರಿಸಿದೆ. ಈ ಉಡಾವಣೆಯೊಂ    ದಿಗೆ, ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ಕಚ್‌ನಿಂದ ಕೊಹಿಮಾವರೆಗೆ ಇಡೀ ದೇಶದಲ್ಲಿ ಡಿಜಿಟಲ್ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಉಪಗ್ರಹ ಉಡಾವಣೆಯ ಸಹಾಯದಿಂದ, ದೂರದ ಪ್ರದೇಶಗಳು ದೇಶದ ಇತರ ಭಾಗಗಳೊಂದಿಗೆ ಹೆಚ್ಚು ಸುಲಭವಾಗಿ ಸಂಪರ್ಕಗೊಳ್ಳುತ್ತವೆ ಎಂದು ಹೇಳಿದರು.

ಭಾರತಕ್ಕೆ ಕ್ರಯೋಜೆನಿಕ್ ರಾಕೆಟ್ ತಂತ್ರಜ್ಞಾನವನ್ನು ನಿರಾಕರಿಸಿದ ಆ ಹಳೆಯ ದಿನಗಳು ನನಗಿಂದು ನೆನಪಾಗುತ್ತಿದೆ. ಆದರೆ, ಇಂದು ಭಾರತದ ವಿಜ್ಞಾನಿಗಳು ಸ್ವದೇಶಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು ಮಾತ್ರವಲ್ಲದೆ, ಅದರ ಸಹಾಯದಿಂದ ಹತ್ತಾರು ಉಪಗ್ರಹಗಳನ್ನು ಏಕಕಾಲದಲ್ಲಿ ಬಾಹ್ಯಾಕಾಶಕ್ಕೆ ಸೇರಿಸಿದ್ದಾರೆ. ಈ ಉಡಾವಣೆಯೊಂದಿಗೆ, ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಭಾರತವು ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ... ಇದರೊಂದಿಗೆ ಭಾರತಕ್ಕೆ ಅವಕಾಶಗಳ ಬಾಗಿಲುಗಳು ತೆರೆದಿವೆ ಎಂದರು.

ಭಾರತದಲ್ಲಿ ಮೊದಲು ಬಾಹ್ಯಾಕಾಶ ಕ್ಷೇತ್ರವು ಸರ್ಕಾರಿ ವ್ಯವಸ್ಥೆಗಳ ವ್ಯಾಪ್ತಿಯಲ್ಲಿ ಸೀಮಿತವಾಗಿತ್ತು. ಇದೀಗ ಯುವ ಜನತೆಗೆ ಅವಕಾಶ ಕಲ್ಪಿಸಿಕೊಟ್ಟಾಗ ಕ್ರಾಂತಿಕಾರಿ ಬದಲಾವಣೆಗಳು ಕಂಡು ಬರುತ್ತಿದೆ. ಭಾರತೀಯ ಕೈಗಾರಿಕೆಗಳು ಮತ್ತು ಸ್ಟಾರ್ಟ್ ಅಪ್‌ಗಳು ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ತರುವಲ್ಲಿ ತೊಡಗಿವೆ. ಇನ್-ಸ್ಪೇಸ್'ನ ಸಹಯೋಗವು ಈ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಸರ್ಕಾರೇತರ ಕಂಪನಿಗಳೂ ಇಂದು ತಮ್ಮ ಪೇಲೋಡ್‌ಗಳು ಮತ್ತು ಉಪಗ್ರಹಗಳನ್ನು ಇನ್-ಸ್ಪೇಸ್ ಮೂಲಕ ಉಡಾವಣೆ ಮಾಡುವ ಸೌಲಭ್ಯವನ್ನು ಪಡೆಯುತ್ತಿವೆ. ಇಡೀ ಜಗತ್ತು ಸೌರಶಕ್ತಿಯನ್ನು ಭವಿಷ್ಯದತ್ತ ನೋಡುತ್ತಿದೆ. ಇಂದು, ಭಾರತವು ತನ್ನ ಸಾಂಪ್ರದಾಯಿಕ ಅನುಭವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತಿದೆ, ಅದಕ್ಕಾಗಿಯೇ, ಇಂದು ನಾವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಒಂದಾಗಿದ್ದೇವೆ. ಸೌರ ಶಕ್ತಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದ ಜೀವನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದು ಅಧ್ಯಯನದ ವಿಷಯವೂ ಆಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com