ನಿತೀಶ್ ಜೀವನದಲ್ಲಿ ಎಂದಿಗೂ ಪ್ರಧಾನಿಯಾಗಲು ಸಾಧ್ಯವಿಲ್ಲ, ಆರ್ ಜೆಡಿಯಿಂದ ಬಿಹಾರ ಜೆಡಿಯು ಮುಕ್ತ- ಸುಶೀಲ್ ಮೋದಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ, ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಾಳ ಬಿಹಾರದಲ್ಲಿ ಜೆಡಿಯು ಮುಕ್ತ ಮಾಡಲಿದೆ ಎಂದು ಭವಿಷ್ಯ ನುಡಿದರು.
Published: 03rd September 2022 08:12 PM | Last Updated: 03rd September 2022 08:12 PM | A+A A-

ನಿತೀಶ್ ಕುಮಾರ್, ಸುಶೀಲ್ ಮೋದಿ
ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ, ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಾಳ ಬಿಹಾರದಲ್ಲಿ ಜೆಡಿಯು ಮುಕ್ತ ಮಾಡಲಿದೆ ಎಂದು ಭವಿಷ್ಯ ನುಡಿದರು.
ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸುಶೀಲ್ ಮೋದಿ, ನಿತೀಶ್ ಕುಮಾರ್ ಜೀವನದಲ್ಲಿ ಎಂದಿಗೂ ಪ್ರದಾನಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಅರುಣಾಚಲ ಪ್ರದೇಶ ಮತ್ತು ಮಣಿಪುರ ಈಗ ಜೆಡಿಯುನಿಂದ ಮುಕ್ತವಾಗಿವೆ. ಲಾಲು ಪ್ರಸಾದ್ ಯಾದವ್ ಶೀಘ್ರದಲ್ಲೇ ಬಿಹಾರದಲ್ಲಿ ಜೆಡಿಯು ಮುಕ್ತಗೊಳಿಸಲಿದ್ದಾರೆ ಎಂದರು.
ಮಣಿಪುರದಲ್ಲಿ ಹಣ ಬಲದಿಂದ ಜೆಡಿಯುವ ಶಾಸಕರನ್ನು ಬಿಜೆಪಿಯೊಂದಿಗೆ ಸೇರಿಸಿಕೊಳ್ಳಲಾಗಿದೆ ಎಂಬ ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್ ಲಾಲನ್ ಸಿಂಗ್ ಅವರ ಆರೋಪ ನಿರಾಧಾರ. ಹಣ ಕೊಟ್ಟು ಖರೀದಿಸುವಷ್ಟು ಅವರ ಶಾಸಕರು ದುರ್ಬಲರೇ? ಹಾಗಿದ್ದರೆ ತಾವು ಯಾರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಮಣಿಪುರದ ಜೆಡಿ(ಯು) ಶಾಸಕರು ತಮ್ಮ ಸ್ವಂತ ಇಚ್ಛೆಯಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಆದರೆ ಅವರು,ಎನ್ ಡಿಎ ಸೇರುವಂತೆ ಯಾವುದೇ ಒತ್ತಡ ಹಾಕಿಲ್ಲ ಎಂದು ಹೇಳಿದ ಸುಶೀಲ್ ಮೋದಿ, ಜೆಡಿಯು ಈಗ ರಾಷ್ಟ್ರೀಯ ಪಕ್ಷವಾಗುವುದರಿಂದ ಇನ್ನೂ ದೂರದಲ್ಲಿದೆ ಎಂದರು.