ಹೈದರಾಬಾದ್: ಹಳಿ ಮೇಲೆ ಇನ್ ಸ್ಟಾಗ್ರಾಂ ರೀಲ್ ಮಾಡುವಾಗ ರೈಲು ಡಿಕ್ಕಿ, ಮುಂದೇನಾಯ್ತು?

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಲು ಹಲವು ಸಾಹಸಕ್ಕೆ ಮುಂದಾಗೋ ಯುವ ಜನತೆ ಅನೇಕ ಅನಾಹುತಗಳನ್ನು ಮಾಡಿಕೊಂಡಿರೋ ನಿದರ್ಶನಗಳು ಸಾಕಷ್ಟಿವೆ. ಇದರ ನಡುವೆಯೇ ತೆಲಂಗಾಣದಲ್ಲಿ ಯುವಕನೊಬ್ಬ ರೈಲ್ವೆ....
ಗಾಯಗೊಂಡ ಯುವಕ
ಗಾಯಗೊಂಡ ಯುವಕ

ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಲು ಹಲವು ಸಾಹಸಕ್ಕೆ ಮುಂದಾಗೋ ಯುವ ಜನತೆ ಅನೇಕ ಅನಾಹುತಗಳನ್ನು ಮಾಡಿಕೊಂಡಿರೋ ನಿದರ್ಶನಗಳು ಸಾಕಷ್ಟಿವೆ. ಇದರ ನಡುವೆಯೇ ತೆಲಂಗಾಣದಲ್ಲಿ ಯುವಕನೊಬ್ಬ ರೈಲ್ವೆ ಟ್ರ್ಯಾಕ್‌ನಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ರೀಲ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದಾನೆ.

ರೀಲ್ಸ್ ಮಾಡಲು 11ನೇ ತರಗತಿಯ ವಿದ್ಯಾರ್ಥಿಯು ರೈಲ್ವೆ ಟ್ರ್ಯಾಕ್ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದನು. ಚಲಿಸುತ್ತಿರುವ ರೈಲನ್ನು ತನ್ನ ಹಿನ್ನೆಲೆಯಾಗಿ ಬಳಸಲು ಪ್ರಯತ್ನಿಸುತ್ತಿದ್ದನು. ಆದರೆ ಆತನ ಸಾಹಸ ವಿಫಲವಾಗಿ ರೈಲು ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ಹಾರಿಬಿದ್ದಿದ್ದಾನೆ.

ಘಟನೆಯಲ್ಲಿ ವಾರಂಗಲ್ ಜಿಲ್ಲೆಯ ಸ್ಥಳೀಯ ಕಾಲೇಜಿನ ವಿದ್ಯಾರ್ಥಿ ಅಜಯ್ ಗಂಭೀರ ಗಾಯಗೊಂಡಿದ್ದಾರೆ. ಹಳಿಯಲ್ಲಿ ಅಜಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ, ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸದ್ಯ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೈಲ್ವೆ ಹಳಿಗಳಂತಹ ಅಪಾಯಕಾರಿ ಪ್ರದೇಶಗಳಲ್ಲಿ ಇನ್ ಸ್ಟಾಗ್ರಾಂ ರೀಲ್‌ಗಳನ್ನು ಮಾಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಯುವಕರು ಮತ್ತು ಯುವತಿಯರನ್ನು ಒಳಗೊಂಡ ಅಪಘಾತಗಳು ದೇಶದಲ್ಲಿ ತುಂಬಾ ಸಾಮಾನ್ಯವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com