ಜಗಳದ ನಂತರ 12ನೇ ಮಹಡಿಯಿಂದ ಜಿಗಿದ ಪತ್ನಿ, ಬಳಿಕ 3 ವರ್ಷದ ಮಗಳೊಂದಿಗೆ ಜಿಗಿದು ಪೊಲೀಸ್ ಪೇದೆ ಆತ್ಮಹತ್ಯೆ!

ಅಹಮದಾಬಾದ್‌ನ ವಸತಿ ಕಟ್ಟಡದ 12ನೇ ಮಹಡಿಯಿಂದ ಜಿಗಿದು ಪೊಲೀಸ್ ಪೇದೆ ಮತ್ತು ಅವರ ಪತ್ನಿ ಮತ್ತು ಅವರ ಅಪ್ರಾಪ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹಮದಾಬಾದ್: ಅಹಮದಾಬಾದ್‌ನ ವಸತಿ ಕಟ್ಟಡದ 12ನೇ ಮಹಡಿಯಿಂದ ಜಿಗಿದು ಪೊಲೀಸ್ ಪೇದೆ ಮತ್ತು ಅವರ ಪತ್ನಿ ಮತ್ತು ಅವರ ಅಪ್ರಾಪ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. 

ದಂಪತಿಗಳು ಜಗಳದ ನಂತರ ಕ್ಷಣಾರ್ಧದಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಸೋಲಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎನ್‌ಆರ್ ವಘೇಲಾ ಹೇಳಿದ್ದಾರೆ.

ಮೃತರನ್ನು ವಸ್ತ್ರಾಪುರ ಪೊಲೀಸ್ ಠಾಣೆಯಲ್ಲಿ ನಿಯೋಜನೆಯಾಗಿದ್ದ ಕಾನ್‌ಸ್ಟೆಬಲ್ ಕುಲದೀಪ್‌ ಸಿನ್ಹ್ ಯಾದವ್, ಅವರ ಪತ್ನಿ ರಿದ್ಧಿ ಮತ್ತು ಅವರ ಮೂರು ವರ್ಷದ ಮಗಳು ಎಂದು ಗುರುತಿಸಲಾಗಿದೆ. ಕುಲದೀಪ್‌ ಸಿನ್ಹ್ ಯಾದವ್ ತನ್ನ ಪತ್ನಿ ಮತ್ತು ಮಗಳೊಂದಿಗೆ ಗೋಟಾ ಪ್ರದೇಶದ ಬಹುಮಹಡಿ ಕಟ್ಟಡದ 12ನೇ ಮಹಡಿಯಲ್ಲಿ ವಾಸವಿದ್ದರು.

ದಂಪತಿಗಳು ತಮ್ಮ ಮಗಳೊಂದಿಗೆ ಮಧ್ಯರಾತ್ರಿ 1:30 ರ ಸುಮಾರಿಗೆ 12ನೇ ಮಹಡಿಯಿಂದ ಜಿಗಿದಿದ್ದಾರೆ. ಅಲ್ಲದೆ ಅವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಟ್ಟಡದ ನಿವಾಸಿಯೊಬ್ಬರು ರಿದ್ಧಿ ಮೊದಲು ಜಿಗಿದರು ಮತ್ತು ನಂತರ ಕುಲದೀಪ್‌ಸಿನ್ಹ್ ಯಾದವ್ ತಮ್ಮ ಮಗಳೊಂದಿಗೆ ಕಟ್ಟಡದಿಂದ ಜಿಗಿದರು ಎಂದು ಹೇಳಿದ್ದಾರೆ. ಅದೇ ಮಹಡಿಯಲ್ಲಿ ವಾಸಿಸುವ ಯಾದವ್ ಅವರ ಸಹೋದರಿ ಪ್ರಕಾರ, ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಬ್ಬರ ನಡುವಿನ ಜಗಳ ಅವರನ್ನು ಇಂತಹ ತೀವ್ರ ಕ್ರಮ ತೆಗೆದುಕೊಳ್ಳಲು ಕಾರಣವಾಗಿರಬಹುದು. ನಾವು ಮೃತದೇಹಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದೇವೆ ಮತ್ತು ಘಟನೆಯ ಕುರಿತು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ತನಿಖಾಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com