ವಿಎಚ್‌ಪಿ, ಬಜರಂಗ ದಳದಿಂದ ಪ್ರತಿಭಟನೆ ಬೆದರಿಕೆ ಬೆನ್ನಲ್ಲೇ ಹಾಸ್ಯ ಕಲಾವಿದನ ಶೋ ರದ್ದು!

ಹಾಸ್ಯದ ಹೆಸರಿನಲ್ಲಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರು ಹಿಂದೂ ದೇವರುಗಳನ್ನು ಅವಮಾನಿಸುವುದನ್ನು ವಿರೋಧಿಸಿ ಕೆಲವು ಬಲಪಂಥೀಯ ಸಂಘಟನೆಗಳು ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದೆ.
ಕುನಾಲ್ ಕಮ್ರಾ
ಕುನಾಲ್ ಕಮ್ರಾ

ಗುರ್ಗಾಂವ್: ಹಾಸ್ಯದ ಹೆಸರಿನಲ್ಲಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರು ಹಿಂದೂ ದೇವರುಗಳನ್ನು ಅವಮಾನಿಸುವುದನ್ನು ವಿರೋಧಿಸಿ ಕೆಲವು ಬಲಪಂಥೀಯ ಸಂಘಟನೆಗಳು ಪ್ರತಿಭಟಿಸುವುದಾಗಿ ಬೆದರಿಕೆ ಹಾಕಿದ ನಂತರ ಈ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ ಅವರ ಗುರ್ಗಾಂವ್ ಶೋ ಅನ್ನು ಆಯೋಜಿಸಿದ್ದ ಕ್ಲಬ್ ರದ್ದುಗೊಳಿಸಿದೆ.

ಪೊಲೀಸರು ಅನುಮತಿ ನಿರಾಕರಿಸಿದ ನಂತರ ಇದೇ ಕಾರಣಗಳಿಗಾಗಿ ದೆಹಲಿಯಲ್ಲಿ ಮುನಾವರ್ ಫಾರೂಕಿ ಅವರ ಪ್ರದರ್ಶನಗಳನ್ನು ರದ್ದುಗೊಳಿಸಿದ ಕೇವಲ ಎರಡು ವಾರಗಳ ನಂತರ ಇದು ಬಂದಿದೆ.

ಸ್ಟುಡಿಯೋ ಕ್ಸೋ ಬಾರ್‌ನಲ್ಲಿ ಸೆಪ್ಟೆಂಬರ್ 17 ಮತ್ತು 18 ರಂದು ತಲಾ ಎರಡು ಸ್ಲಾಟ್‌ಗಳ ಪ್ರದರ್ಶನವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಇಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿವೆ. ಜಿಲ್ಲಾಡಳಿತ ಏನನ್ನೂ ಹೇಳದಿದ್ದರೂ, ಸ್ಟುಡಿಯೋ ಕ್ಸೋ ಬಾರ್‌ನ ಪ್ರಧಾನ ವ್ಯವಸ್ಥಾಪಕ ಸಾಹಿಲ್ ದಾವ್ರಾ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿ ಭಜರಂಗದಳದ ಇಬ್ಬರು ವ್ಯಕ್ತಿಗಳು ಬಂದು ಪ್ರದರ್ಶನಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದರು, ನಮಗೆ ತೊಂದರೆ ಬೇಡವೆಂದು ನಾವು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದರು.

ಕಾರ್ಯಕ್ರಮವನ್ನು ಪ್ರಚಾರ ಮಾಡುತ್ತಿದ್ದ ತನ್ನ ಇನ್ ಸ್ಟಾಗ್ರಾಂ  ಪೋಸ್ಟ್ ಅನ್ನು ನಂತರ ಕ್ಲಬ್ ತೆಗೆದುಹಾಕಿತು. ನಾನು ಮಾಲೀಕರು, ಪೊಲೀಸರು ಮತ್ತು ಹಾಸ್ಯನಟರೊಂದಿಗೆ ಮಾತನಾಡಿದ್ದೇನೆ ಮತ್ತು ನನ್ನ ಕಂಪನಿ ಮತ್ತು ಸಂಸ್ಥೆಗೆ ಯಾವುದೇ ಅಪಾಯವನ್ನು ನಾನು ಬಯಸುವುದಿಲ್ಲ ಎಂದು ಕ್ಲಬ್ ಮ್ಯಾನೇಜರ್ ತಿಳಿಸಿದ್ದು, ನಾವು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ನಾವು ಟಿಕೆಟ್ ನೀಡುವ ಕಂಪನಿಗೆ ಪತ್ರ ಬರೆದಿದ್ದೇವೆ ಮತ್ತು ಪ್ರದರ್ಶನವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಎಂದಿದ್ದಾರೆ.

ಏತನ್ಮಧ್ಯೆ ಕುನಾಲ್ ಕಮ್ರಾ ರದ್ಧತಿಯ ಬಗ್ಗೆ ಪ್ರತಿಕ್ರಿಯಿಸಿ ಆರೋಪಗಳನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಆದರೆ ಕಾರ್ಯಕ್ರಮ ರದ್ದತಿ ಬಗ್ಗೆ ಅವರು ಖುದ್ದಾಗಿ ಪ್ರತಿಕ್ರಿಯಿಸಿಲ್ಲ.

ಕುಮಾಲ್ ಕಮ್ರಾ ಅವರು ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಹಾಸ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಇತರ ಪಕ್ಷಗಳ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಆಗಾಗ್ಗೆ ಕೆಣಕುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com