ಭಾರತ್ ಜೋಡೋ ಯಾತ್ರೆ ವೇಳೆ 'ವಿಲೇಜ್ ಕುಕಿಂಗ್ ಚಾನೆಲ್' ಯೂಟ್ಯೂಬರ್ಸ್ ಭೇಟಿಯಾದ ರಾಹುಲ್ ಗಾಂಧಿ!

ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಜನಪ್ರಿಯ ಯೂಟ್ಯೂಬ್ ಚಾನೆಲ್ 'ವಿಲೇಜ್ ಕುಕಿಂಗ್ ಚಾನೆಲ್' ಚಾನೆಲ್ ನ ಸದಸ್ಯರನ್ನು ಭೇಟಿ ಮಾಡಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಕನ್ಯಾಕುಮಾರಿ: ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಜನಪ್ರಿಯ ಯೂಟ್ಯೂಬ್ ಚಾನೆಲ್ 'ವಿಲೇಜ್ ಕುಕಿಂಗ್ ಚಾನೆಲ್' ಚಾನೆಲ್ ನ ಸದಸ್ಯರನ್ನು ಭೇಟಿ ಮಾಡಿದರು.

ಕಳೆದ ವರ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಯಲು ಪ್ರದೇಶದಲ್ಲಿ ಚಾನೆಲ್ ಸದಸ್ಯರು ತಯಾರಿಸಿದ್ದ ಮಶ್ರೂಮ್ ಬಿರಿಯಾನಿ ರುಚಿ ನೋಡಿದ್ದರು.  ವಿಲೇಜ್ ಕುಕಿಂಗ್ ಚಾನೆಲ್ ಒಂದು ಕೋಟಿ (10 ಮಿಲಿಯನ್) ಚಂದಾದಾರರನ್ನು ತಲುಪಿದ ತಮಿಳುನಾಡಿನ ಮೊದಲ ಯೂಟ್ಯೂಬ್  ಚಾನಲ್ ಆಗಿದೆ.

ಮಾಜಿ ಕ್ಯಾಟರರ್ ಪೆರಿಯತಂಬಿ ಅವರಿಂದ 2018 ರಲ್ಲಿ ಪ್ರಾರಂಭವಾದ ಚಾನಲ್ ಈಗ ಸುಮಾರು 18 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳ್ಸೆಲ್ವನ್, ಮುತ್ತುಮಾಣಿಕ್ಕಂ ಮತ್ತು ಸುಬ್ರಮಣಿಯನ್ ವಾಹಿನಿಯಲ್ಲಿ ಕಾಣಿಸಿಕೊಳ್ಳುವ ಇತರ ಸದಸ್ಯರು.

ಆರು ಜನರ ತಂಡವು ಆರಂಭದಲ್ಲಿ ಈ ಚಾನಲ್ ಅನ್ನು ಪ್ರಾರಂಭಿಸಿತು. ಆದರೆ ಶೀಘ್ರದಲ್ಲೇ  ಅವರ ಅಡುಗೆ ತಯಾರಿ ಶೈಲಿ, ಪರಿಕಲ್ಪನೆ ವೈರಲ್ ಆಯಿತು.  ಪ್ರತಿ ವೀಡಿಯೊದಲ್ಲಿ ಹೆಚ್ಚು ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸುತ್ತಾ ಹೋಯಿತು. ಸಾಂಪ್ರದಾಯಿಕ ಅಡುಗೆ ವಿಧಾನಗಳನ್ನು ಬಳಸಿಕೊಂಡು ಈ ಜನರು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಪಾಕವಿಧಾನಗಳನ್ನು ಬಳಸಿಕೊಂಡು ಅಡುಗೆ ಮಾಡುವುದನ್ನು ವೀಡಿಯೊಗಳು ಸಾಮಾನ್ಯವಾಗಿ ಒಳಗೊಂಡಿರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com