ಛತ್ತೀಸಗಢದ ಕಾಂಗ್ರೆಸ್ ಅಭಿವೃದ್ಧಿ ಮಾದರಿ ಅಧ್ಯಯನಕ್ಕೆ ಜೆ.ಪಿ ನಡ್ಡಾ ಬರುತ್ತಿದ್ದಾರೆ: ಸಿಎಂ ಟೀಕೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಛತ್ತೀಸಗಢ ರಾಜ್ಯದಲ್ಲಿನ ಕಾಂಗ್ರೆಸ್ ಅಭಿವೃದ್ಧಿ ಮಾದರಿಯ ಅಧ್ಯಯನ ನಡೆಸಲು ಆಗಮಿಸುತ್ತಿದ್ದಾರೆ ಎಂದು ಛತ್ತೀಸಗಢ ಮುಖ್ಯಮಂತ್ರಿ ಭುಪೇಶ್ ಭಗೇಲ್ ಟೀಕಿಸಿದ್ದಾರೆ.
Published: 10th September 2022 03:06 PM | Last Updated: 10th September 2022 06:27 PM | A+A A-

ಭೂಪೇಶ್ ಭಗೇಲ್
ಚಂಡೀಗಡ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಛತ್ತೀಸಗಢ ರಾಜ್ಯದಲ್ಲಿನ ಕಾಂಗ್ರೆಸ್ ಅಭಿವೃದ್ಧಿ ಮಾದರಿಯ ಅಧ್ಯಯನ ನಡೆಸಲು ಆಗಮಿಸುತ್ತಿದ್ದಾರೆ ಎಂದು ಛತ್ತೀಸಗಢದ ಮುಖ್ಯಮಂತ್ರಿ ಭುಪೇಶ್ ಭಗೇಲ್ ಟೀಕಿಸಿದ್ದಾರೆ.
ನಮ್ಮ ರಾಜ್ಯದ ಮಾದರಿ ಕಲಿಯಲು ಬಿಜೆಪಿ ಇಲ್ಲಿಗೆ ಬರುತ್ತಿದೆ. ನಮ್ಮ ಯೋಜನೆಗಳನ್ನು ಕೇಂದ್ರ ಅಳವಡಿಸಿಕೊಂಡಿದೆ. ಬಿಜೆಪಿ ಏಕಾಂಗಿಯಾಗಿ ಹೋರಾಡುವುದಿಲ್ಲ, ಇಡಿ, ಐಟಿ ಮತ್ತು ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಸಹೋದರ ಮತ್ತು ಸಹೋದರಿಯ ಪಕ್ಷ. ಅವರ ಸ್ವಂತ ಪಕ್ಷವು ರಾಜವಂಶದ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಜೆ.ಪಿ ನಡ್ಡಾ ಹೇಳಿದ ನಂತರ ಮುಖ್ಯಮಂತ್ರಿ ಭುಪೇಶ್ ಭಗೇಲ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಿಎಂ, ಕೇಂದ್ರ ಸಚಿವ ಸ್ಥಾನದಿಂದ ಕೈಬಿಟ್ಟವರಿಗೆ ಪಕ್ಷದ ಜವಾಬ್ದಾರಿ ನೀಡಿದ ಬಿಜೆಪಿ
ರಾಯ್‌ಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ನಡ್ಡಾ, 'ಕಾಂಗ್ರೆಸ್ ಸಹೋದರ ಸಹೋದರಿಯರ ಪಕ್ಷವಾಗಿದೆ, ಈ ದಿನಗಳಲ್ಲಿ ಮುಖ್ಯಮಂತ್ರಿ ಭಾಗೇಲ್ ಭಾರತ್ ಜೋಡೋ' ರ್ಯಾಲಿಗಳಿಗೆ ಹೋಗುತ್ತಿದ್ದಾರೆ, ಅವರು ಮೊದಲು ತಮ್ಮದೇ ಪಕ್ಷವನ್ನು ಒಟ್ಟುಗೂಡಿಸಬೇಕು. ನಮ್ಮ ಹೋರಾಟ ಕುಟುಂಬ ರಾಜಕಾರಣದ ವಿರುದ್ಧ ಎಂದು ಹೇಳಿದ್ದರು.
ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಡ್ಡಾ ಅವರು ಕೂಡ ಚಂಡೀಗಡಕ್ಕೆ ಭೇಟಿ ನೀಡಿದ್ದಾರೆ. ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ನಗರದಲ್ಲಿ ಪಕ್ಷದ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಶುಕ್ರವಾರ ತನ್ನ `ಭಾರತ್ ಜೋಡೋ ಯಾತ್ರೆ~ಯನ್ನು ಮುಂದುವರೆಸಿದೆ. ಮೂರನೇ ದಿನದ ಯಾತ್ರೆಯು ನಾಗರಕೋಯಿಲ್‌ನ ಸ್ಕಾಟ್ ಕ್ರಿಶ್ಚಿಯನ್ ಕಾಲೇಜಿನಿಂದ ತಮಿಳುನಾಡಿನ ಅಳಗಿಯಮಂಡಪಂ ಜಂಕ್ಷನ್‌ವರೆಗೆ ಪ್ರಾರಂಭವಾಯಿತು.