ಮೇಘಾಲಯ ಪೊಲೀಸರಿಂದ ಮಾಜಿ ಬಂಡುಕೋರ ನಾಯಕನ ಹತ್ಯೆ: ವರದಿ
ಮೇಘಾಲಯ ಮಾಜಿ ಬಂಡುಕೋರ ನಾಯಕ ಚೆರಿಸ್ಟರ್‌ಫೀಲ್ಡ್ ಥಾಂಗ್‌ಖೀವ್ ಅವರನ್ನು ಮೇಘಾಲಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಏಕವ್ಯಕ್ತಿ ತನಿಖಾ ಆಯೋಗ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ....
Published: 10th September 2022 01:07 AM | Last Updated: 02nd November 2022 11:29 AM | A+A A-

ಮೇಘಾಲಯ ಸಿಎಂ ಕನ್ರಾಡ್ ಕೆ. ಸಂಗ್ಮಾ
ಗುವಾಹಟಿ: ಮೇಘಾಲಯ ಮಾಜಿ ಬಂಡುಕೋರ ನಾಯಕ ಚೆರಿಸ್ಟರ್‌ಫೀಲ್ಡ್ ಥಾಂಗ್‌ಖೀವ್ ಅವರನ್ನು ಮೇಘಾಲಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಏಕವ್ಯಕ್ತಿ ತನಿಖಾ ಆಯೋಗ ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ತಿಳಿಸಿದೆ.
"ಕಾರ್ಯಾಚರಣೆಯು ಉತ್ತಮವಾಗಿ ಯೋಜಿಸಲಾಗಿತ್ತು. ಆದರೆ ಅಜಾಗರೂಕತೆಯಿಂದ, ತರಾತುರಿಯಿಂದ ಸರಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ. ಇದು ಒಂದು ವಿಫಲ ಕಾರ್ಯಾಚರಣೆಯಾಗಿದೆ. ಸತ್ತವರನ್ನು ಜೀವಂತವಾಗಿ ಬಂಧಿಸುವ ಉದ್ದೇಶ ವಿಫಲವಾಗಿದೆ" ಎಂದು ನಿವೃತ್ತ ನ್ಯಾಯಮೂರ್ತಿಟಿ. ವೈಫೇ ನೇತೃತ್ವದ ಆಯೋಗ ಹೇಳಿದೆ.
ಥಾಂಗ್‌ಖೀವ್‌ನ ಶಿಲ್ಲಾಂಗ್ ನಿವಾಸದಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಯಾವುದೇ ಆಲೋಚನೆಯಿಲ್ಲದೆ ಮತ್ತು ಅತಿಯಾದ ಬಲ ಬಳಕೆ ಮಾಡಿರುವುದು ಅಪರಾಧವಾಗಿದೆ" ಎಂದು ವರದಿ ಹೇಳಿದೆ.
ಇದನ್ನು ಓದಿ: ಮೇಘಾಲಯ ಸರ್ಕಾರಕ್ಕೆ ಬಿಕ್ಕಟ್ಟು; ಬೆಂಬಲ ಮರುಪರಿಶೀಲಿಸಲಿರುವ ಬಿಜೆಪಿ?
ಪೊಲೀಸ್ ಸಿಬ್ಬಂದಿ ಬೆಳಗ್ಗೆವರೆಗೆ ಕಾಯಬೇಕಿತ್ತು ಮತ್ತು ಥಾಂಗ್‌ಖೀವ್ ಹಾಗೂ ಅವರ ಕುಟುಂಬ ಸದಸ್ಯರು ಇದ್ದ ಕೋಣೆಗಳ ಮೇಲೆ ಅಶ್ರುವಾಯು ಪ್ರಯೋಗಿಸಿ ಅವರು ಹೊರಗೆ ಬರುವಂತೆ ಒತ್ತಾಯಿಸಬಹುದಿತ್ತು ಮತ್ತು ನಂತರ ಅವರನ್ನು ಬಂಧಿಸಬಹುದಿತ್ತು ಎಂದು ವರದಿ ತಿಳಿಸಿದೆ.