ಕ್ಲಿನಿಕ್ ಬಾಗಿಲು ತೆಗೆಯಲು ವಿಳಂಬ: ವೈದ್ಯ, ವೈದ್ಯನ ಮಗನ ಮೇಲೆ ಹಲ್ಲೆ, ವಿಡಿಯೋ ವೈರಲ್!

ಕ್ಲಿನಿಕ್ ಬಾಗಿಲು ತೆಗೆಯಲು ವಿಳಂಬ ಮಾಡಿದರೆಂಬ ಕಾರಣಕ್ಕೆ ದುಷ್ಕರ್ಮಿಗಳ ಗುಂಪು ವೈದ್ಯ ಹಾಗೂ ಅವರ ಮಗನ ಮೇಲೆ ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ.
ಸಿಸಿ ಕ್ಯಾಮೆರಾ ದೃಶ್ಯ
ಸಿಸಿ ಕ್ಯಾಮೆರಾ ದೃಶ್ಯ

ಮುಂಬೈ: ಕ್ಲಿನಿಕ್ ಬಾಗಿಲು ತೆಗೆಯಲು ವಿಳಂಬ ಮಾಡಿದರೆಂಬ ಕಾರಣಕ್ಕೆ ದುಷ್ಕರ್ಮಿಗಳ ಗುಂಪು ವೈದ್ಯ ಹಾಗೂ ಅವರ ಮಗನ ಮೇಲೆ ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. 

ಸೆಪ್ಟೆಂಬರ್ 6 ರಂದು ಮಹಾರಾಷ್ಟ್ರದ ಬಾರಾಮತಿಯಲ್ಲಿ ರೋಗಿಯ ಸಂಬಂಧಿಕರು ವೈದ್ಯರ ಮಗನ ಮೇಲೂ ಹಲ್ಲೆ ನಡೆಸಿರುವುದು ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಗಾವಿಯಲ್ಲಿರುವ ವೈದ್ಯ ಯುವರಾಜ್ ಗಾಯಕ್ವಾಡ್ ಅವರ ಮನೆಯಿಂದ ಹೊರಗಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ.

ಅವರ ದೂರಿನ ಪ್ರಕಾರ ಯುವರಾಜ್ ಗಾಯಕ್ವಾಡ್ ಅವರು ತಮ್ಮ ಕುಟುಂಬದೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಬಾಗಿಲು ಜೋರಾಗಿ ಬಡಿಯುವುದು ಕೇಳಿಬಂದಿದೆ. ಬಾಗಿಲು ತೆರೆಯಲು ತಡವಾದ ನಂತರ ಪುರುಷರು ಕಿಟಕಿಯ ಗಾಜು ಒಡೆದರು.ವೈದ್ಯರು ಅಂತಿಮವಾಗಿ ಬಾಗಿಲು ತೆರೆದಾಗ ಆನಂದ್ ಅಲಿಯಾಸ್ ಅನಿಲ್ ಜಗತಾಪ್, ವಿಶ್ವಜೀತ್ ಜಗತಾಪ್, ಅಶೋಕ್ ಜಗತಾಪ್ ಮತ್ತು ಭೂಷಣ್ ಜಗತಾಪ್ ಅವರ ಮನೆಗೆ ನುಗ್ಗಿ ಅವರನ್ನು ಥಳಿಸಲು ಪ್ರಾರಂಭಿಸಿದರು.

ಸಿಸಿ ಕ್ಯಾಮೆರಾದ ದೃಶ್ಯಗಳಲ್ಲಿ ಒಬ್ಬ ವ್ಯಕ್ತಿ ಕ್ಲಿನಿಕ್‌ನ ಒಳಗೆ ಬಾಗಿಲು ತೆರೆದು  ಗಾಯಕ್‌ವಾಡ್ ಅವರ ಮಗನನ್ನು ಕೋಣೆಯಿಂದ ಹೊರಗೆಳೆದು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.

ಮಾಲೆಗಾಂವ್ ಪೊಲೀಸರು ವೈದ್ಯರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ದೂರಿನ ಅನ್ವಯ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com