ಮಧ್ಯರಾತ್ರಿ 12.30ಕ್ಕೆ ಇ.ಡಿ ಕಚೇರಿಗೆ ಬಂದ ಅಭಿಷೇಕ್ ಬ್ಯಾನರ್ಜಿ ಸೊಸೆ ಮನೇಕಾ ಗಂಭೀರ್; ಹೊಸ ಸಮನ್ಸ್ ನೀಡಿದ ಇ.ಡಿ!

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸೊಸೆ ಮನೇಕಾ ಗಂಭೀರ್ ಅವರು ಸೋಮವಾರ 12.30ಕ್ಕೆ ಇ.ಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಅದರಂತೆ ಗಂಭೀರ್ ಅವರು ಮಧ್ಯರಾತ್ರಿಯ ಇ.ಡಿ ಕಚೇರಿಗೆ ಆಗಮಿಸಿದ್ದು, ಜಾರಿ ನಿರ್ದೇಶನಾಲಯದ ಕಣ್ಣು ಕೆಂಪಾಗಿಸಿದೆ.
ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ

ಕೋಲ್ಕತ್ತಾ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸೊಸೆ ಮನೇಕಾ ಗಂಭೀರ್ ಅವರು ಸೋಮವಾರ 12.30ಕ್ಕೆ ಇ.ಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಅದರಂತೆ ಗಂಭೀರ್ ಅವರು ಮಧ್ಯರಾತ್ರಿಯ ಇ.ಡಿ ಕಚೇರಿಗೆ ಆಗಮಿಸಿದ್ದು, ಜಾರಿ ನಿರ್ದೇಶನಾಲಯದ ಕಣ್ಣು ಕೆಂಪಾಗಿಸಿದೆ.

ನೀಲಿ ಕುರ್ತಾ ಧರಿಸಿದ್ದ ಗಂಭೀರ್ ಅವರು ಸಾಲ್ಟ್ ಲೇಕ್ ಪ್ರದೇಶದಲ್ಲಿನ ಸಿಜಿಒ ಕಾಂಪ್ಲೆಕ್ಸ್‌ನಲ್ಲಿನ ಇ.ಡಿ ಕಚೇರಿಯನ್ನು ತಲುಪಿದರು ಮತ್ತು ನೋಟಿಸ್‌ನೊಂದಿಗೆ ಬೀಗ ಹಾಕಿದ್ದ ಕಚೇರಿ ಮುಂದೆ ಚಿತ್ರಕ್ಕೆ ಪೋಸ್ ನೀಡಿದರು. ಇದನ್ನು ಸಂಸ್ಥೆ ನಂತರ 'ಮುದ್ರಣ ದೋಷ' ಎಂದು ಕರೆದಿದೆ.

'ಬೆಳಗ್ಗೆ 12.30ಕ್ಕೆ (12:30 AM) ಹಾಜರಾಗುವಂತೆ ಇ.ಡಿ ನನಗೆ ನೋಟಿಸ್ ನೀಡಿತ್ತು. ಹಾಗಾಗಿ ನಾನು ಬಂದಿದ್ದೇನೆ' ಎಂದು ಗಂಭೀರ್ ನಂತರ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು. ಇ.ಡಿ ಕಚೇರಿಗೆ ಮಧ್ಯರಾತ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಅವರು ವಕೀಲರ ಜೊತೆಗಿದ್ದರು.

ಅಂತರರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣಿಸಲು ನಿರಾಕರಿಸಿದ ನಂತರ ಸೆಪ್ಟೆಂಬರ್ 10 ರಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಏಜೆನ್ಸಿ ಅಧಿಕಾರಿಗಳು ಸೋಮವಾರ 'ಮಧ್ಯಾಹ್ನ 12:30 ಗಂಟೆಗೆ' ಇಲ್ಲಿನ ಇ.ಡಿ ಕಚೇರಿಗೆ ಹಾಜರಾಗುವಂತೆ ಗಂಭೀರ್ ಅವರಿಗೆ ಸಮನ್ಸ್ ಹಸ್ತಾಂತರಿಸಿದ್ದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಆಕೆಗೆ ಹೊಸದಾಗಿ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಸಮನ್ಸ್‌ನಲ್ಲಿ ಮುದ್ರಿಸಲಾಗಿದ್ದ ಸಮಯವು 'ಮುದ್ರಣ ದೋಷ' ಮತ್ತು ತಪ್ಪಾಗಿದೆ. ಅದು ಸೆಪ್ಟೆಂಬರ್ 12 ರಂದು '12:30 PM' ಆಗಿರಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಗಂಭೀರ್ ಅವರನ್ನು ಇ.ಡಿ ಈವರೆಗೂ ವಿಚಾರಣೆ ನಡೆಸಿಲ್ಲ. ಆದರೆ, ಇದೇ ಪ್ರಕರಣದಲ್ಲ ಈ ಹಿಂದೆ ಸಿಬಿಐ ವಿಚಾರಣೆ ನಡೆಸಿತ್ತು.

ಈ ವರ್ಷಾಂತ್ಯದೊಳಗೆ ರಾಜ್ಯದ 3 ಲಕ್ಷಕ್ಕೂ ಹೆಚ್ಚು ಚಹಾ ತೋಟದ ಕಾರ್ಮಿಕರಿಗೆ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಪ್ರಯೋಜನಗಳನ್ನು ಒದಗಿಸದಿದ್ದರೆ, ಪಶ್ಚಿಮ ಬಂಗಾಳದ ಎಲ್ಲಾ ಬಿಜೆಪಿ ಸಂಸದರು ಮತ್ತು ಶಾಸಕರ ಮನೆಗಳಿಗೆ ಘೇರಾವ್ ಮಾಡಲಾಗುವುದು ಎಂದು ಅಭಿಷೇಕ್ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ.

ಜಲ್ಪೈಗುರಿ ಜಿಲ್ಲೆಯ ಮಲ್ಬಜಾರ್‌ನಲ್ಲಿ ಚಹಾ ಕಾರ್ಮಿಕರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಸೋಮವಾರದಿಂದಲೇ ಪಿಎಫ್ ಮತ್ತು ಗ್ರಾಚ್ಯುಟಿಗೆ ಒತ್ತಾಯಿಸಿ ಪ್ರತಿಭಟನಾ ಕಾರ್ಯಕ್ರಮವನ್ನು ಪ್ರಾರಂಭಿಸಲು ಪಕ್ಷದ ಕಾರ್ಮಿಕ ಸಂಘವನ್ನು ಕೇಳಿದರು ಮತ್ತು ಈ ಪ್ರಯೋಜನಗಳನ್ನು ನೀಡಲು ನಿರಾಕರಿಸುವ ಚಹಾ ತೋಟದ ಮಾಲೀಕರ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸುವಂತೆ ಹೇಳಿದರು.

'ಬಿಜೆಪಿ ನಾಯಕರು ವಲಸೆ ಹಕ್ಕಿಗಳಿದ್ದಂತೆ, ಚುನಾವಣೆಗೂ ಮುನ್ನ ಬರುತ್ತಾರೆ, ದೊಡ್ಡ ದೊಡ್ಡ ಭರವಸೆಗಳನ್ನು ನೀಡಿ ಚುನಾವಣೆಯ ನಂತರ ಅದನ್ನು ಈಡೇರಿಸದೆ ಹಾರಿ ಹೋಗುತ್ತಾರೆ. ಮುಚ್ಚಿದ ಏಳು ಚಹಾ ತೋಟಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಕೇಂದ್ರವು ಭರವಸೆ ನೀಡಿದೆ. ಆದರೆ, ಏನನ್ನೂ ಮಾಡಲಿಲ್ಲ. ಆದರೆ, ರಾಜ್ಯದಲ್ಲಿ ಟಿಎಂಸಿ ಸರ್ಕಾರವು ಎಲ್ಲಾ ಮುಚ್ಚಿದ ಚಹಾ ತೋಟಗಳು ಮತ್ತೊಮ್ಮೆ ಕಾರ್ಯನಿರ್ವಹಿಸುವಂತೆ ಮಾಡಿದೆ ಎಂದು ಅವರು ಹೇಳಿದರು.

'ನರೇಂದ್ರ ಮೋದಿಯವರು ಚಹಾ ಮಾರುವವರಾಗಿದ್ದರೂ, ಅವರು ಚಹಾ ತೋಟದ ಕಾರ್ಮಿಕರಿಗೆ ಏನನ್ನೂ ಮಾಡಲಿಲ್ಲ. ಪಿಎಫ್ ಮತ್ತು ಗ್ರಾಚುಯಿಟಿ ಸೌಲಭ್ಯಗಳನ್ನು ನೀಡುವುದು ಕೇಂದ್ರದ ಜವಾಬ್ದಾರಿಯಾಗಿದೆ. ನಾಳೆಯಿಂದಲೇ ಈ ವಿಷಯದ ಬಗ್ಗೆ ಪ್ರತಿಭಟನೆಯನ್ನು ಪ್ರಾರಂಭಿಸಲು ನಾನು ನಿಮ್ಮನ್ನು ಕೇಳುತ್ತೇನೆ. ಇವುಗಳನ್ನು ನೀಡಲು ನಿರಾಕರಿಸಿದ ಮಾಲೀಕರು ಮತ್ತು ಈ ವರ್ಷಾಂತ್ಯದೊಳಗೆ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಜನವರಿಯಿಂದ ಬಿಜೆಪಿ ಶಾಸಕರು ಮತ್ತು ಸಂಸದರ ಮನೆಗಳನ್ನು ಘೇರಾವ್ ಮಾಡಲಾಗುವುದು' ಎಂದು ಅವರು ಹೇಳಿದರು.

ಇ.ಡಿ ಮತ್ತು ಸಿಬಿಐ ಗಳನ್ನು ತನ್ನ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡಲು 'ದುರುಪಯೋಗ' ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಬ್ಯಾನರ್ಜಿ, '(ಕಾನೂನು ಸಚಿವ) ಮೊಲೋಯ್ ಘಟಕ್ ಅವರ ಮನೆ ಮೇಲೆ ದಾಳಿ ನಡೆಸಲಾಯಿತು. ಆದರೆ, ಕೇವಲ 14,000 ರೂಪಾಯಿ ನಗದು ಮಾತ್ರ ಪತ್ತೆಯಾಗಿದೆ. ಕೋಟಿ ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಮತ್ತು ಬಿಜೆಪಿ ಆಶ್ರಯ ನೀಡಿದ ಜನರನ್ನು ಏಕೆ ಉಳಿಸಲಾಗುತ್ತಿದೆ?' ಎಂದು ಅವರು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com