ಗುಜರಾತ್: ಎಎಪಿ ಜೊತೆಗಿನ ಚುನಾವಣಾ ಪೂರ್ವ ಮೈತ್ರಿ ಮುರಿದುಕೊಂಡ ಬಿಟಿಪಿ!

ಚೋಟು ವಾಸವಾ ಅವರ ಭಾರತೀಯ ಟ್ರೈಬಲ್ ಪಾರ್ಟಿ ಆಮ್ ಆದ್ಮಿ ಪಕ್ಷದೊಂದಿಗಿನ ತನ್ನ ನಾಲ್ಕು ತಿಂಗಳ ಚುನಾವಣಾ ಪೂರ್ವ ಮೈತ್ರಿಯನ್ನು ಮುರಿದುಕೊಂಡಿದೆ ಮತ್ತು ಬಿಟಿಪಿಯನ್ನು ಸೋಲಿಸಲು ಭಾರತೀಯ ಜನತಾ ಪಕ್ಷವು ಅರವಿಂದ್ ಕೇಜ್ರಿವಾಲ್ ಅವರನ್ನು ಕಳುಹಿಸಿದೆ ಎಂದು ಆರೋಪಿಸಿದೆ.
ಅರವಿಂದ್ ಕೇಜ್ರಿವಾಲ್, ಬಿಟಿಪಿಯ ಚೋಟು ವಾಸವಾ
ಅರವಿಂದ್ ಕೇಜ್ರಿವಾಲ್, ಬಿಟಿಪಿಯ ಚೋಟು ವಾಸವಾ

ಭರೂಚ್: ಚೋಟು ವಾಸವಾ ಅವರ ಭಾರತೀಯ ಟ್ರೈಬಲ್ ಪಾರ್ಟಿ ಆಮ್ ಆದ್ಮಿ ಪಕ್ಷದೊಂದಿಗಿನ ತನ್ನ ನಾಲ್ಕು ತಿಂಗಳ ಚುನಾವಣಾ ಪೂರ್ವ ಮೈತ್ರಿಯನ್ನು ಮುರಿದುಕೊಂಡಿದೆ ಮತ್ತು ಬಿಟಿಪಿಯನ್ನು ಸೋಲಿಸಲು ಭಾರತೀಯ ಜನತಾ ಪಕ್ಷವು ಅರವಿಂದ್ ಕೇಜ್ರಿವಾಲ್ ಅವರನ್ನು ಕಳುಹಿಸಿದೆ ಎಂದು ಆರೋಪಿಸಿದೆ.

ಚಾಂದೇರಿಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಸವಾ, ಮೇ ತಿಂಗಳಲ್ಲಿ ರ್‍ಯಾಲಿಯೊಂದರಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ಬಿಟಿಪಿ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿದ್ದವು. ಎಎಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡಿದ್ದೇವೆ. ನಮ್ಮನ್ನು ಸೋಲಿಸಲು ಬಿಜೆಪಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಳುಹಿಸಿದೆ. ಚುನಾವಣೆಯಲ್ಲಿ ನೇರವಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿ ಮತ್ತು ಅಮಿತ್ ಶಾ ಅವರಿಗೆ ಗೊತ್ತಿದೆ. ಆದ್ದರಿಂದ ಕೇಜ್ರಿವಾಲ್ ಅವರನ್ನು ಕಳುಹಿಸಿದ್ದಾರೆ ಎಂದರು.

ಶಾ ವಿರೋಧಿಗಳನ್ನು ಅಂತ್ಯಗೊಳಿಸುತ್ತಾರೆ ಆದರೆ ಕೇಜ್ರಿವಾಲ್ ವಿಚಾರದಲ್ಲಿ ಹಾಗೆ ಇಲ್ಲ. ಅವರು ಪ್ರತಿವಾರ ಇಲ್ಲಿಗೆ ಬರುತ್ತಾರೆ. ಎರಡು ಅಥವಾ ಮೂರು ದಿನ ಇಲ್ಲಿಯೇ ಉಳಿಯುತ್ತಾರೆಯ ಆದಾಗ್ಯೂ. ಅವರ ವಿರುದ್ದ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ತಿಳಿಸಿದರು. 

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಟಿಪಿ ಇಬ್ಬರು ಶಾಸಕರನ್ನು ಹೊಂದಿದೆ. ರಾಜ್ಯದಲ್ಲಿ ಆದಿವಾಸಿಗಳ ನಡುವೆ ಪಕ್ಷಕ್ಕೆ ಹಿಡಿತವಿದೆ. ಎಎಪಿಯೊಂದಿಗೆ ಬಿಟಿಪಿಯನ್ನು ವಿಲೀನಗೊಳಿಸಬೇಕೆಂದು ಕೇಜ್ರಿವಾಲ್ ಬಯಸಿದ್ದರು ಎಂದು ವಾಸವಾ ಆರೋಪಿಸಿದ್ದಾರೆ.

ಮೈತ್ರಿಯ ಸಮಯದಲ್ಲಿ, ಕೇಜ್ರಿವಾಲ್ ಅವರು ನಮ್ಮ ಪಕ್ಷವನ್ನು ಅವರೊಂದಿಗೆ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ, ವಿಲೀನ ಸಾಧ್ಯವಿಲ್ಲ ಮತ್ತು ನಾವು ಸ್ವತಂತ್ರ ಪಕ್ಷವಾಗಿ ಉಳಿಯುತ್ತೇವೆ ಎಂದು ನಾನು ಅವರಿಗೆ ಹೇಳಿದ್ದೆ ಎಂದು ಬುಡಕಟ್ಟು ನಾಯಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com