ನಿಗದಿಯಂತೆಯೇ ಲಡಾಖ್ ನಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಚಾಲ್ತಿಯಲ್ಲಿ: ಸೇನಾ ಮುಖ್ಯಸ್ಥ

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಲಡಾಖ್ ಭಾಗದಲ್ಲಿ ಸೇನಾ ಹಿಂತೆಗೆದ ಬಗ್ಗೆ ಮಾತನಾಡಿದ್ದು, ಚೀನಾ- ಭಾರತದ ಸೇನಾಪಡೆಗಳು ಈಗಾಗಲೇ ನಿರ್ಧಾರವಾಗಿದ್ದಂತೆ ಸೇನಾ ಹಿಂತೆಗೆತದ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ. 
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಲಡಾಖ್ ಭಾಗದಲ್ಲಿ ಸೇನಾ ಹಿಂತೆಗೆದ ಬಗ್ಗೆ ಮಾತನಾಡಿದ್ದು, ಚೀನಾ- ಭಾರತದ ಸೇನಾಪಡೆಗಳು ಈಗಾಗಲೇ ನಿರ್ಧಾರವಾಗಿದ್ದಂತೆ ಸೇನಾ ಹಿಂತೆಗೆತದ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ. 

"ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದ ಪ್ಯಾಟ್ರೋಲಿಂಗ್ ಪಾಯಿಂಟ್ 15 ನಲ್ಲಿ ಚೀನಾ-ಭಾರತ ಸೇನೆಗಳನ್ನು ಹಿಂಪಡೆಯುತ್ತಿವೆ ನಿಗದಿಯಂತೆಯೇ ಪ್ರಕ್ರಿಯೆ ನಡೆಯುತ್ತಿದೆ" ಎಂದು ಹೇಳಿದ್ದಾರೆ. 

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೆ.09 ರಂದು ಈ ಬಗ್ಗೆ ಮಾಹಿತಿ ನೀಡಿ, ಸೆ.12 ರ ವೇಳೆಗೆ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿತ್ತು. 

ಲಡಾಖ್ ಗೆ ಭೇಟಿ ನೀಡಿದ್ದ ಜನರಲ್ ಪಾಂಡೇ ಸೋಮವಾರ ದೆಹಲಿಗೆ ಮರಳಿದ್ದು, ಸೇನಾ ಲಾಜಿಸ್ಟಿಕ್ಸ್ ಕುರಿತ ಸೆಮಿನಾರ್ ನಲ್ಲಿ ಮಾತನಾಡುತ್ತಿದ್ದಾಗ ಲಡಾಖ್ ಬಗ್ಗೆ ಪ್ರಸ್ತಾಪಿಸಿ ಈ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com