'ವಿಶ್ವದರ್ಜೆಯ ಹೆದ್ದಾರಿ'; 'ಕಷ್ಟ ಕೋಳಿಯದ್ದು, ಮೊಟ್ಟೆ ತಿನ್ನೋದು ಮಾತ್ರ ಇನ್ಯಾರೋ': ಎಂಜಿನಿಯರ್‌ಗಳು-ಗುತ್ತಿಗೆದಾರರಿಗೆ ಗಡ್ಕರಿ ಶ್ಲಾಘನೆ

ವಿಶ್ವದರ್ಜೆಯ ಹೆದ್ದಾರಿ ನಿರ್ಮಾಣಕ್ಕಾಗಿ ತಮಗೆ ಸಿಕ್ಕ ಶ್ಲಾಘನೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಎಂಜಿನಿಯರ್‌ಗಳು-ಗುತ್ತಿಗೆದಾರರಿಗೆ ನೀಡಿದ್ದು, ಅವರ ಶ್ರಮದಿಂದಾಗಿಯೇ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಬೆಂಗಳೂರು: ವಿಶ್ವದರ್ಜೆಯ ಹೆದ್ದಾರಿ ನಿರ್ಮಾಣಕ್ಕಾಗಿ ತಮಗೆ ಸಿಕ್ಕ ಶ್ಲಾಘನೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಎಂಜಿನಿಯರ್‌ಗಳು-ಗುತ್ತಿಗೆದಾರರಿಗೆ ನೀಡಿದ್ದು, ಅವರ ಶ್ರಮದಿಂದಾಗಿಯೇ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

2 ದಿನಗಳ ಭೇಟಿ ನಿಮಿತ್ತ ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 'ಭಾರತಮಾಲಾ' ಅಡಿಯಲ್ಲಿ 'ಮಂಥನ' ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ತಮಗೆ ಅಮೆರಿಕ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರು ಕರೆ ಮಾಡಿ ಹೆದ್ದಾರಿ ನಿರ್ಮಾಣದ ಕುರಿತು ತಮ್ಮನ್ನು ಶ್ಲಾಘಿಸಿದ್ದರು. 

ಇದೇ ವಿಚಾರವಾಗಿ ಮಾತನಾಡಿದ ಗಡ್ಕರಿ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ತಮಗೆ ಕರೆ ಮಾಡಿ ವಿಶ್ವದರ್ಜೆಯ ಹೆದ್ದಾರಿಗಳನ್ನು ನಿರ್ಮಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಹೆಂಡತಿ ಖುಷಿಪಟ್ಟಳು. ಆದರೆ ಅದರ ಕ್ರೆಡಿಟ್  ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಹೋಗಬೇಕಿತ್ತು ಎಂದಳು. ಮೆಹನತ್ ಕರೇ ಮುರ್ಗಾ, ಅಂದಾ ಖಾಯೆ ಫಕೀರ್ (ಕಷ್ಟ ಕೋಳಿಯದ್ದು, ಮೊಟ್ಟೆ ತಿನ್ನೋದು ಮಾತ್ರ ಇನ್ಯಾರೋ) ಎಂದು ಹೇಳಿ ಗಡ್ಕರಿ ನಕ್ಕರು.

ಅಮೃತ್ ಸರೋವರ್ ಮಿಷನ್ ಅಡಿಯಲ್ಲಿ ಹೆದ್ದಾರಿಗಳ ಮೂಲಕ ಕೆರೆಗಳ ನಿರ್ಮಾಣ
ತಮ್ಮ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ನೀಡುವ ನಿಮಿತ್ತ ಹೊಸ ಪರಿಕಲ್ಪನೆಯನ್ನು ಪರಿಚಯಿಸಿರುವ ನಿತಿನ್ ಗಡ್ಕರಿ ಅವರು, ಅಮೃತ್ ಸರೋವರ್ ಮಿಷನ್ ಅಡಿಯಲ್ಲಿ ಹೆದ್ದಾರಿಗಳ ಮೂಲಕ ಕೆರೆಗಳ ನಿರ್ಮಾಣ ಮಾಡಲು ಇಲಾಖೆ ಗಂಭೀರ ಚಿಂತನೆಯಲ್ಲಿದೆ ಎಂದು ಹೇಳಿದ್ದಾರೆ. 

"ಕೇಂದ್ರ ಸರ್ಕಾರವು 'ಅಮೃತ ಸರೋವರ' ಯೋಜನೆಗೆ ಮುಂದಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಮಹತ್ತರವಾದ ಕೆಲಸವನ್ನು ಮಾಡಬಲ್ಲದು. ವರ್ಷಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ, ಕೃಷಿ ಬಿಕ್ಕಟ್ಟಿಗೆ ನೀರಿನ ಕೊರತೆ ಒಂದು ಕಾರಣ. ಹಲವು ಸ್ಥಳಗಳಲ್ಲಿ ನೀರಿನ ಬಿಕ್ಕಟ್ಟು ಇದೆ. ನೀರಿನ ಕೊರತೆಯಿಲ್ಲ ಆದರೆ ನೀರಿನ ನಿರ್ವಹಣೆ (ಒಂದು ಸಮಸ್ಯೆಯಾಗಿದೆ) ನಾವು ನಮ್ಮ ಹೆದ್ದಾರಿಗಳನ್ನು ಕೆರೆಗಳನ್ನು ನಿರ್ಮಿಸಲು ಬಳಸಬಹುದು. ಹೆದ್ದಾರಿಗಳನ್ನು ನಿರ್ಮಿಸಲು ಮಣ್ಣಿನ ಅಗತ್ಯವಿದ್ದು, ಅದನ್ನು ಪಡೆಯುವುದರಿಂದ ಹೊಸ ಜಲಮೂಲಗಳು ರೂಪುಗೊಳ್ಳುತ್ತವೆ. ಇದು ರಸ್ತೆ ನಿರ್ಮಾಣದ ಅಗತ್ಯವನ್ನು ಪೂರೈಸುವುದಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಕೆರೆಗಳನ್ನು ಒದಗಿಸುತ್ತದೆ. ಅಂತಿಮವಾಗಿ ಇದು ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಗಡ್ಕರಿ ಹೇಳಿದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕಾರ್ಯಗತಗೊಳಿಸಿದ ಯೋಜನೆಯಿಂದಾಗಿ ವಿಶ್ವವಿದ್ಯಾನಿಲಯವು 36 ಕೆರೆಗಳು ಮತ್ತು ಹತ್ತಿರದ ಹಳ್ಳಿಗಳಿಗೆ 22 ಬಾವಿಗಳನ್ನು ಪಡೆದ ಉದಾಹರಣೆಯನ್ನು ಅವರು ಇದೇ ವೇಳೆ ಉಲ್ಲೇಖಿಸಿದರು. ಇಂತಹ ನವೀನ ಕ್ರಮಗಳು ಯೋಜನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಇತರರಿಗೆ ಸಹಾಯ ಮಾಡುತ್ತದೆ. ಯೋಜನಾ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳಿಗೆ ಅವರು ಮನವಿ ಮಾಡಿದರು. ಬಾಳಿಕೆ ಬರುವ ರಸ್ತೆಗಳ ನಿರ್ಮಾಣಕ್ಕೆ ಒತ್ತು ನೀಡಿದ ಸಚಿವರು, ಕನಿಷ್ಠ 25 ವರ್ಷಗಳ ಕಾಲ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆಗೆ ರಾಜ್ಯಗಳು ಹೋಗುವಂತೆ ಸೂಚಿಸಿದರು.

ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸುವ ಗುರಿಯೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯ ಭಾಗವಾಗಿ 'ಮಿಷನ್ ಅಮೃತ್ ಸರೋವರ'ವನ್ನು ಏಪ್ರಿಲ್ 24, 2022 ರಂದು ಪ್ರಾರಂಭಿಸಲಾಯಿತು. ಗ್ರಾಮೀಣಾಭಿವೃದ್ಧಿ ಸಚಿವಾಲಯವು ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯೊಂದಿಗೆ ಮಿಷನ್ ಅನ್ನು ಪ್ರಾರಂಭಿಸಿದೆ. ಎರಡು ದಿನಗಳ 'ಐಡಿಯಾಸ್ ಟು ಆಕ್ಷನ್-ಟುವರ್ಡ್ಸ್ ಎ ಸ್ಮಾರ್ಟ್, ಸಸ್ಟೈನಬಲ್ ರೋಡ್ ಇನ್ಫ್ರಾ, ಮೊಬಿಲಿಟಿ ಮತ್ತು ಲಾಜಿಸ್ಟಿಕ್ಸ್ ಇಕೋಸಿಸ್ಟಮ್,' ಕೇಂದ್ರ ಮತ್ತು ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com