ರಾಜಸ್ಥಾನದಲ್ಲಿ ಭಾರೀ ಮಳೆ: ಸಿಡಿಲಿಗೆ 7 ಮಂದಿ ಬಲಿ, ನಾಲ್ವರಿಗೆ ಗಾಯ

ರಾಜಸ್ಥಾನದ ಜಲಾವರ್ ಮತ್ತು ಉದಯಪುರ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: ರಾಜಸ್ಥಾನದ ಜಲಾವರ್ ಮತ್ತು ಉದಯಪುರ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆಯಿಂದ ಸಂಜೆ 5.30ರವರೆಗೆ ಶ್ರೀಗಂಗಾನಗರದಲ್ಲಿ 34, ಬಾರ್ಮರ್‌ನಲ್ಲಿ 30.6, ದುಗರ್‌ಪುರದಲ್ಲಿ 13, ಬೂಂದಿಯಲ್ಲಿ 11ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಅಸ್ನಾವರ್, ಖಾನ್‌ಪುರ, ಮಂದಾವರ್ ಮತ್ತು ಡಾಂಗಿಪುರದಲ್ಲಿ ಶನಿವಾರ ಸಿಡಿಲು ಬಡಿದ ಸಾವುಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ. ಭಾನುವಾರ ಸಂಜೆ ಜಬ್ಲಾ ಗ್ರಾಮದಲ್ಲಿ ಸಿಡಿಲು ಬಡಿದು ಮನೀಶ್, ಮನೀಶಾ ಮತ್ತು ಬಾಲಕಿ ಹಾಕಾ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಉದಯಪುರ ಜಿಲ್ಲೆಯ ತಿಡಿ ಎಸ್‌ಎಚ್‌ಒ ಗೋಪಾಲ್ ಕೃಷ್ಣ ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ, ಈ ಅವಧಿಯಲ್ಲಿ ಬನ್ಸ್ವಾರದ ಜಗಪುರದಲ್ಲಿ 8 ಸೆಂ.ಮೀ, ಕೋಟಾದ ಸಂಗೋಡ್‌ನಲ್ಲಿ 5 ಸೆಂ.ಮೀ., ಜಲಾವರದ ಅಕ್ಲೇರಾದಲ್ಲಿ 5 ಸೆಂ.ಮೀ. ಡುಂಗರಪುರದ ನಿತುವದಲ್ಲಿ 5 ಸೆಂ.ಮೀ. ಡುಂಗರಪುರದ ವೆಜಾದಲ್ಲಿ 4 ಸೆಂ.ಮೀ ಮಳೆ ದಾಖಲಾಗಿದೆ. ಪ್ರತಾಪಗಢದ ಪೀಪಲ್‌ಖಂಟ್‌ನಲ್ಲಿ 4 ಸೆಂ.ಮೀ. ಮಳೆಯಾಗಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com