ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಲು ಮಹಿಳಾ ಶಾಸಕರಿಗೆ ಪ್ರತ್ಯೇಕ ದಿನ ನಿಗದಿ

ಹೊಸ ಮತ್ತು ವಿಶಿಷ್ಟ ಉಪಕ್ರಮದ ಭಾಗವಾಗಿ ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಹಿಳಾ ಶಾಸಕರಿಗೆ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರತ್ಯೇಕವಾಗಿ ಒಂದು ದಿನ ನಿಗದಿಪಡಿಸಲು ಉತ್ತರ...
ಉತ್ತರ ಪ್ರದೇಶ ವಿಧಾನಸಭೆ
ಉತ್ತರ ಪ್ರದೇಶ ವಿಧಾನಸಭೆ

ಲಖನೌ: ಹೊಸ ಮತ್ತು ವಿಶಿಷ್ಟ ಉಪಕ್ರಮದ ಭಾಗವಾಗಿ ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಹಿಳಾ ಶಾಸಕರಿಗೆ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರತ್ಯೇಕವಾಗಿ ಒಂದು ದಿನ ನಿಗದಿಪಡಿಸಲು ಉತ್ತರ ಪ್ರದೇಶ ವಿಧಾನಸಭೆ ನಿರ್ಧರಿಸಿದೆ.

ಮಹಿಳಾ ಶಾಸಕರ ಆಲೋಚನೆಗಳಿಗೆ ಮನ್ನಣೆ ನೀಡಿದ ವಿಧಾಸಭೆ ಸ್ಪೀಕರ್ ಸತೀಶ್ ಮಹಾನ್ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ನಿಗದಿಪಡಿಸಿದ ದಿನದಂದು ಅಧಿವೇಶನದಲ್ಲಿ ಮಹಿಳಾ ಶಾಸಕರು ಮಾತ್ರ ತಮ್ಮ ಆಲೋಚನೆಗಳನ್ನು ಮಂಡಿಸಲು ಅವಕಾಶ ನೀಡಿದ್ದಾರೆ. 

ಶಾಸಕರೊಂದಿಗಿನ ಸಂವಾದದಲ್ಲಿ, ಸದನದಲ್ಲಿ ತಮಗೆ ಮಾತನಾಡಲು ಸೂಕ್ತ ಅವಕಾಶ ಸಿಗುತ್ತಿಲ್ಲ ಎಂದು ಮಹಿಳಾ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

"ನಿರ್ದಿಷ್ಟ ದಿನದಂದು ಪ್ರಶ್ನೋತ್ತರ ಸಮಯದ ನಂತರ ಎಲ್ಲಾ ಮಹಿಳಾ ಸದಸ್ಯರಿಗೆ ಅವರು ಬಯಸಿದ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ" ಎಂದು ಸತೀಶ್ ಮಹಾನಾ ಅವರು ತಿಳಿಸಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ 47 ಮಹಿಳಾ ಶಾಸಕರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com