ಇಂದು ರಾತ್ರಿ 10 ಗಂಟೆಗೆ ಸಿಯುಇಟಿ-ಯುಜಿ ಫಲಿತಾಂಶ ಪ್ರಕಟ: ಯುಜಿಸಿ ಅಧ್ಯಕ್ಷ ಜಗದೇಶ್ ಕುಮಾರ್

ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ)-ಯುಜಿಯ ಚೊಚ್ಚಲ ಆವೃತ್ತಿಯ ಫಲಿತಾಂಶ ಗುರುವಾರ ರಾತ್ರಿ 10 ಗಂಟೆಗೆ ಪ್ರಕಟಿಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಜಗದೇಶ್ ಕುಮಾರ್ ಅವರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ)-ಯುಜಿಯ ಚೊಚ್ಚಲ ಆವೃತ್ತಿಯ ಫಲಿತಾಂಶ ಗುರುವಾರ ರಾತ್ರಿ 10 ಗಂಟೆಗೆ ಪ್ರಕಟಿಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಜಗದೇಶ್ ಕುಮಾರ್ ಅವರು ತಿಳಿಸಿದ್ದಾರೆ.

"ಸಿಯುಇಟಿ-ಯುಜಿ ಫಲಿತಾಂಶವನ್ನು ಇಂದು ರಾತ್ರಿ 10 ಗಂಟೆ ಸುಮಾರಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಪ್ರಕಟಿಸುತ್ತಿದೆ. ವಿದ್ಯಾರ್ಥಿಗಳಿಗೆ ಶುಭಾಶಯಗಳು" ಎಂದು ಕುಮಾರ್ ಹೇಳಿದ್ದಾರೆ.

ಮೊದಲ ಬಾರಿಗೆ ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಗಳ ಪ್ರವೇಶಕ್ಕಾಗಿ ಜುಲೈನಲ್ಲಿ ಆರಂಭವಾದ ಸಿಯುಇಟಿ-ಯುಜಿ ಪರೀಕ್ಷೆಗಳು ಆಗಸ್ಟ್ 30 ರಂದು ಮುಕ್ತಾಯಗೊಂಡಿತ್ತು.

ಸಿಯುಇಟಿ ಪರೀಕ್ಷೆಗಾಗಿ ದಾಖಲೆಯ 14.9 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಇದು ದೇಶದ ಎರಡನೇ ಅತಿದೊಡ್ಡ ಪ್ರವೇಶ ಪರೀಕ್ಷೆಯಾಗಿದೆ. ನೀಟ್-ಯುಜಿಗಾಗಿ ಸುಮಾರು 18 ಲಕ್ಷ ಅಭ್ಯರ್ಥಿಗಳು ನೋಂದಾಸಿಕೊಂಡಿದ್ದು, ಇದು ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com