ಮದ್ಯಪಾನ ಮಾಡಿ ನಿಲ್ಲಲೂ ಆಗದೆ ವಿಮಾನ ತಪ್ಪಿಸಿಕೊಂಡರಾ ಪಂಜಾಬ್ ಸಿಎಂ? ಇದಕ್ಕೆ ಎಎಪಿ ಹೇಳಿದ್ದೇನು?

ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಹೊರಟಿದ್ದ ಲುಫ್ತಾನ್ಸಾ ವಿಮಾನದಿಂದ ಭಗವಂತ್ ಮಾನ್ ಅವರನ್ನು ಪಾನಮತ್ತರಾಗಿದ್ದ ಕಾರಣದಿಂದ ಹೊರಗೆ ಹಾಕಲಾಗಿದೆ ಎಂಬ ವರದಿಗಳು ವಿಪಕ್ಷಗಳಿಗೆ ಆಹಾರವಾಗಿವೆ. ಈ ರೀತಿ ವರ್ತಿಸಿ ಪಂಜಾಬ್ ಮುಖ್ಯಮಂತ್ರಿ ಪಂಜಾಬಿಗಳನ್ನು ನಾಚಿಕೆಪಡಿಸಿದ್ದಾರೆ ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.
ಭಗವಂತ್ ಮಾನ್
ಭಗವಂತ್ ಮಾನ್

ಚಂಡೀಗಢ: ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಹೊರಟಿದ್ದ ಲುಫ್ತಾನ್ಸಾ ವಿಮಾನದಿಂದ ಭಗವಂತ್ ಮಾನ್ ಅವರನ್ನು ಪಾನಮತ್ತರಾಗಿದ್ದ ಕಾರಣದಿಂದ ಹೊರಗೆ ಹಾಕಲಾಗಿದೆ ಎಂಬ ವರದಿಗಳು ವಿಪಕ್ಷಗಳಿಗೆ ಆಹಾರವಾಗಿವೆ. ಈ ರೀತಿ ವರ್ತಿಸಿ ಪಂಜಾಬ್ ಮುಖ್ಯಮಂತ್ರಿ ಪಂಜಾಬಿಗಳನ್ನು ನಾಚಿಕೆಪಡಿಸಿದ್ದಾರೆ ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.

ಆದರೆ ಸಿಎಂ ಭಗವಂತ್ ಮಾನ್ ಅಸ್ವಸ್ಥರಾಗಿದ್ದರಿಂದ ಅವರು ದೆಹಲಿಗೆ ಮರಳಲು ವಿಳಂಬ ಮಾಡಿದರು ಎಂದು ಸಿಎಂ ಕಚೇರಿ ಹೇಳಿದೆ. ಅವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದೆ.

ಲುಫ್ಥಾನ್ಸದ ಹೇಳಿಕೆಯನ್ನು ಹಂಚಿಕೊಂಡಿರುವ ಎಎಪಿ, ವಿಮಾನ ಬದಲಾವಣೆಯ ಕಾರಣದಿಂದ ಯೋಜಿಸಿದ್ದಕ್ಕಿಂತ ತಡವಾಗಿ ವಿಮಾನ ಹೊರಟಿತು ಎಂದು ಹೇಳಿದೆ. ಭಗವಂತ್ ಮಾನ್ ಕುಡಿದಿದ್ದರು , ಆ ಕಾರಣದಿಂದಾಗಿ ವಿಮಾನವು ನಾಲ್ಕು ಗಂಟೆಗಳ ಕಾಲ ವಿಳಂಬವಾಯಿತು ಎಂದು ಹೇಳುವ ವರದಿಗಳ ಬಗ್ಗೆ ವಿರೋಧ ಪಕ್ಷಗಳು ಟೀಕಿಸಿವೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತುಂಬಾ ಕುಡಿದಿದ್ದರಿಂದ ಅವರನ್ನು ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಸಹ ಪ್ರಯಾಣಿಕರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳುತ್ತವೆ. ಇದು 4 ಗಂಟೆಗಳ ವಿಮಾನ ವಿಳಂಬಕ್ಕೆ ಕಾರಣವಾಯಿತು. ಅವರು ಎಎಪಿಯ ರಾಷ್ಟ್ರೀಯ ಸಮಾವೇಶವನ್ನು ತಪ್ಪಿಸಿಕೊಂಡರು. ಈ ವರದಿಗಳು ಮುಜುಗರಕ್ಕೆ ಕಾರಣವಾಗಿವೆ ಮತ್ತು ಜಗತ್ತಿನಾದ್ಯಂತ ಇರುವ ಪಂಜಾಬಿಗಳನ್ನು ನಾಚಿಕೆಪಡಿಸಿದೆ ಎಂದು ಅಕಾಲಿ ದಳದ ಮುಖಂಡ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿದ್ದಾರೆ.

ಮಾನ್ ಅವರು ಅತಿಯಾದ ಮದ್ಯವನ್ನು ಸೇವಿಸಿದ್ದರಿಂದ ಅವರು ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಅವರ ಪತ್ನಿ ಮತ್ತು ಅವರ ಜೊತೆಯಲ್ಲಿ ಭದ್ರತಾ ಸಿಬ್ಬಂದಿ ಬೆಂಬಲ ನೀಡಬೇಕಾಯಿತು ಎಂದು ಪ್ರಯಾಣಿಕರೊಬ್ಬರು ಹೇಳಿರುವುದನ್ನ ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಏರ್‌ಲೈನ್ಸ್ ಹೇಳಿಕೆಯಲ್ಲಿ ವಿಳಂಬವಾದ ಒಳಬರುವ ವಿಮಾನ ಮತ್ತು ವಿಮಾನ ಬದಲಾವಣೆಯಿಂದಾಗಿ ಮೂಲತಃ ಯೋಜಿಸಿದ್ದಕ್ಕಿಂತ ತಡವಾಗಿ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ನಮ್ಮ ವಿಮಾನವು ಹೊರಟಿತು. ಡೇಟಾ ರಕ್ಷಣೆಯ ಕಾರಣಗಳಿಗಾಗಿ ನಾವು ವೈಯಕ್ತಿಕ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಒದಗಿಸುವುದಿಲ್ಲ ಎಂದಿದೆ.

ಬಂಡವಾಳ ಹೂಡಿಕೆ ಮತ್ತು ಒಪ್ಪಂದ ಆಕರ್ಷಿಸಲು ಭಗವಂತ್ ಮಾನ್ ಸೆಪ್ಟೆಂಬರ್ 11 ರಿಂದ 18 ರವರೆಗೆ ಜರ್ಮನಿಗೆ ಪ್ರವಾಸದಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com